ಜೈಲಿನಲ್ಲಿ ಪರಿಚಯವಾಗಿ ಹೊರಬಂದು ಮನೆಗಳ್ಳತನಕ್ಕಿಳಿದ್ದ ಮೂವರ ಬಂಧನ

ಬೆಂಗಳೂರು, ಮಾ.8- ಜೈಲಿನಲ್ಲಿದ್ದಾಗ ಪರಿಚಯವಾಗಿ ಹೊರಬಂದ ನಂತರವೂ ಕನ್ನಕಳವು ಮಾಡುತ್ತಿದ್ದ ಕುಖ್ಯಾತ ಮೂವರು ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 55.18 ಲಕ್ಷ ರೂ. ಮೌಲ್ಯದ 1.12 ಕೆ.ಜಿ. ಚಿನ್ನಾಭರಣ ಮತ್ತು 1.96 ಕೆ.ಜಿ. ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ. ನಂದಿನಿ ಲೇಔಟ್‍ನ ಜೈಮಾರುತಿ ನಗರದಲ್ಲಿ ಪಿರ್ಯಾದುದಾರರು ವಾಸವಿದ್ದು, ಫೆ.15ರಂದು ಬೆಳಿಗ್ಗೆ 11.15ರ ಸುಮಾರಿನಲ್ಲಿ ಮನೆಗೆ ಬೀಗ ಹಾಕಿಕೊಂಡು ತಮ್ಮ ಸಂಬಂಧಿಕರ ಮಗನ ವಿವಾಹ ನಿಶ್ಚಯ ಕಾರ್ಯಕ್ರಮಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಅಂದು ಮಧ್ಯಾಹ್ನ 2.30ಕ್ಕೆ ಮನೆಗೆ […]