ಸಾಲಬಾದೆಯಿಂದ ನೊಂದು ಬೆಂಕಿ ಹಚ್ಚಿಕೊಂಡು ಕುಟುಂಬದ ಮೂವರು ಆತ್ಮಹತ್ಯೆ

ತಿರುವನಂತಪುರಂ,ಜ.6- ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕಡಿನಂಕುಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಡಿನಂಕುಲಂ ನಿವಾಸಿ ರಮೇಶ್ (50), ಅವರ ಪತ್ನಿ ಸಲಜಕುಮಾರಿ (44), ಪುತ್ರಿ ರೇಶ್ಮಾ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ನಿನ್ನೆ ವಾಪಾಸ್ಸಾಗಿದ್ದರು. ಅದರ ಪ್ರಯುಕ್ತ ಸಂಬಂಧಿಕರು ಮನೆಗೆ ಬಂದಿದ್ದರು. ಗುರುವಾರ ಮಧ್ಯ ರಾತ್ರಿ 11.30ರ ಸುಮಾರಿಗೆ ಕೊಠಡಿಯಲ್ಲಿ ಮೂವರು ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿ ಉರಿಯುವ ಮತ್ತು ಅದರಲ್ಲಿ ಸುಡುತ್ತಿರುವವರ […]