ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ

ಬೆಂಗಳೂರು, ಡಿ.20- ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಯಶೋಧ(70) ಇವರ ಮಗಳು ಸುಮನ್(41), ಮಗ ನರೇಶ್ ಗುಪ್ತ(36) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಯಶೋಧ ಅವರಿಗೆ ಮೂವರು ಮಕ್ಕಳಿದ್ದು, ಒಬ್ಬ ಮಗಳನ್ನು ಮದುವೆ ಮಾಡಿದ್ದು, ಅವರು ರಾಜಾಜಿನಗರದಲ್ಲಿ ವಾಸವಾಗಿದ್ದಾರೆ. ಯಶೋಧ ಅವರ ಪತಿ ನಾಲ್ಕು ತಿಂಗಳ ಹಿಂದೆ ಅಷ್ಟೇ ಮೃತಪಟ್ಟಿದ್ದರು. ಪತಿ ಅಗಲಿಕೆಯಿಂದ ಯಶೋಧ ಮಾನಸಿಕವಾಗಿ ನೊಂದಿದ್ದರು. ಪತಿ ಬಳಸುತ್ತಿದ್ದ […]