ಕ್ರಿಕೆಟ್ ಬೆಟ್ಟಿಂಗ್ : ಮೂವರು ಬುಕ್ಕಿಗಳ ಸೆರೆ, 10.5 ಲಕ್ಷ ನಗದು, 3 ಮೊಬೈಲ್‍ಗಳ ವಶ

ಬೆಂಗಳೂರು, ಡಿ.5- ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಮೂವರು ಬುಕ್ಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 10.5 ಲಕ್ಷ ರೂ. ನಗದು ಹಾಗೂ ಮೂರು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಸ್ಥಳಗಳಲ್ಲಿ ಲಾಡ್ರ್ಸ್ ಎಕ್ಸಾರ್ಚ್ ಎಂಬ ಆಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿ ಜೂಜಾಟ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಇಂಗ್ಲೆಂಡ್ ಮತ್ತು ಪಾಕಿಸ್ತಾನ ದೇಶಗಳ ನಡುವೆ ನಡೆದ ಕ್ರಿಕೆಟ್ ಟೆಸ್ಟ್ ಪಂದ್ಯಗಳಿಗೆ ಸಂಬಂಧಿಸಿದಂತೆ ತಂಡಗಳ ಸೋಲು […]

ಮೂವರು ಆರೋಪಿಗಳ ಬಂಧನ, 5 ಲಕ್ಷ ಮೌಲ್ಯದ ಮಾಲು ಜಪ್ತಿ

ಬೆಂಗಳೂರು,ಡಿ.5- ದ್ವಿಚಕ್ರ ವಾಹನಗಳು, ಲಾಪ್‍ಟಾಪ್ ಕಳ್ಳತನ ಹಾಗು ನಡೆದು ಹೋಗುವ ಸಾರ್ವಜನಿಕರಿಂದ ಮೊಬೈಲ್‍ಗಳನ್ನು ಎಗರಿಸುತ್ತಿದ್ದ ಮೂವರು ಆರೋಪಿಗಳನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ರಾಮೋಹಳ್ಳಿಯ ನಾಗರಾಜು ಅಲಿಯಾಸ್ ಚೇತು(19), ರವಿ ಅಲಿಯಾಸ್ ಮಾಡು(29) ಮತ್ತು ಕೆ.ಆರ್.ಮಾರ್ಕೆಟ್‍ನ ಮೊಹಮ್ಮದ್ ಸಾಕ್(26) ಬಂಧಿತ ಆರೋಪಿಗಳು. ಆರೋಪಿಗಳಿಂದ ನಗರಾದ್ಯಂತ ಕಳ್ಳತನ ಮಾಡಿದ್ದ 8 ದ್ವಿಚಕ್ರ ವಾಹನಗಳು, ಎರಡು ಲಾಪ್‍ಟಾಪ್‍ಗಳು ಮತ್ತು ವಿವಿಧ ಕಂಪನಿಯ 30 ಮೊಬೈಲ್ ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ […]

ಟಾಟಾಏಸ್ ಪಲ್ಟಿ, ಮೂವರ ದುರ್ಮರಣ

ಬೆಂಗಳೂರು,ಡಿ.5- ತರಕಾರಿ ತೆಗೆದುಕೊಂಡು ಹೋಗಲು ಎಪಿಎಂಸಿಗೆ ಟಾಟಾಏಸ್ ವಾಹನದಲ್ಲಿ ಆರೇಳು ಮಂದಿ ಬರುತ್ತಿದ್ದಾಗ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ನಿವಾಸಿಗಳಾದ ಮಂಜುನಾಥ್, ಲಕ್ಷ್ಮಮ್ಮ ಮತ್ತು ರತ್ನಮ್ಮ ಮೃತಪಟ್ಟವರು. ಘಟನೆಯಲ್ಲಿ ಗಾಯಗೊಂಡಿರುವ ಮೂವರ ಪೈಕಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನಿಬ್ಬರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಇವರೆಲ್ಲರೂ ತರಕಾರಿ […]

3 ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ : ಮದ್ದೂರಿನಲ್ಲಿ ಹೃದಯ ವಿದ್ರಾವಕ ಘಟನೆ

ಬೆಂಗಳೂರು,ಡಿ.2- ತನ್ನ ಮೂವರು ಪುಟ್ಟ ಪುಟ್ಟ ಮಕ್ಕಳನ್ನು ಕೊಂದು ನಂತರ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿದೆ. ಮದ್ದೂರಿನ ಹೊಳೆಬೀದಿ ನಿವಾಸಿ ಊಸನಾಕೌಸರ್(30), ಮಕ್ಕಳಾದ ಹ್ಯಾರೀಶ್ (7), ಆಲಿಸಾ (4) ಮತ್ತು ಫಾತಿಮಾ (2) ಮೃತಪಟ್ಟವರು. ಮೂಲತಃ ತುಮಕೂರಿನ ಊಸನಾ ಅವರು ಹತ್ತು ವರ್ಷದ ಹಿಂದೆ ಮದ್ದೂರಿನ ಹೊಳೆಬೀದಿ ನಿವಾಸಿ, ಕಾರು ಮೆಕ್ಯಾನಿಕ್ ಆಖಿಲ್ ಎಂಬಾತನನ್ನು ಮದುವೆಯಾಗಿದ್ದು, ನರ್ಸಿಂಗ್‍ಹೋಮ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು.ದಂಪತಿ ತನ್ನ ಮೂವರು ಮಕ್ಕಳೊಂದಿಗೆ ಹೊಳೆ […]

BIG NEWS: ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ

ಬೆಂಗಳೂರು,ನ.29- ಡ್ರಾಪ್ ನೆಪದಲ್ಲಿ ರ‍್ಯಾಪಿಡೋ ಬೈಕ್ ಸೇವೆ ಪಡೆದಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ 22 ವರ್ಷದ ಯುವತಿಯೊಬ್ಬಳು ಎಸ್‍ಜಿ ಪಾಳ್ಯ ದಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗಲು ಮಧ್ಯರಾತ್ರಿ 12.30ರ ಸುಮಾರಿನಲ್ಲಿ ರ‍್ಯಾಪಿಡೋ ಆಪ್ ಮೂಲಕ ಬೈಕ್ ಬುಕ್ ಮಾಡಿದ್ದರು. ಮದ್ಯಪಾನ ಮಾಡಿದ್ದ ಯುವತಿ ಮಾರ್ಗಮಧ್ಯೆದಲ್ಲಿ ಅರೆಪ್ರಜ್ಞಾ ವಸ್ಥೆಯಲ್ಲಿದ್ದನ್ನು ಗಮನಿಸಿದ ರ್ಯಾಪಿಡೋ ಬೈಕ್ ಸವಾರ ತನ್ನ ಸ್ನೇಹಿತನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಕಾಶ್ಮೀರಿ […]

ರಾಜಸ್ಥಾನ : ನೆರೆಮನೆಗೆ ನುಗ್ಗಿ ಮೂವರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ

ಜೈಪುರ, ನ.27- ಸಣ್ಣ ಮನಸ್ತಾಪ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬ ನೆರೆಮನೆಗೆ ನುಗ್ಗಿ ಗುಂಡು ಹಾರಿಸಿ ಮೂವರು ಸಹೋದರರನ್ನು ಗುಂಡಿಕ್ಕಿ ಕೊಂದಿರುವ ಘಟನೆ ರಾಜಸ್ಥಾನದ ಭರತ್‍ಪುರ ಜಿಲ್ಲಾಯ ಸಿಕ್ರೋರಾ ಗ್ರಾಮದಲ್ಲಿ ನಡೆದಿದೆ. ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಮೃತರನ್ನು ಸಮಂದರ್, ಗಜೇಂದ್ರ ಮತ್ತು ಈಶ್ವರ್ ಎಂದು ಪೊಲೀಸರು ತಿಳಿಸಿದ್ದಾರೆ. ಆ ನೆರೆಮನೆಯ ಆರೋಪಿ ಲಖನ್‍ನನ್ನು ಬಂಧಿಸಲಾಗಿದ್ದು, ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮೃತನಲ್ಲಿ ಒಬ್ಬನಾದ ಸಮಂದರ್ ಇತ್ತೀಚೆಗೆ ಲಖನ್ ಮನೆಯಲ್ಲಿ ನಡೆದಿದ್ದ ಜಗಳ ಬಿಡಿಸಲು ಹೋಗಿದ್ದರು ಇದು ವಿವಾದಕ್ಕೆ […]

ಛತ್ತಿಸ್‍ಗಡದಲ್ಲಿ ಮೂವರು ನಕ್ಸಲರ ಹತ್ಯೆ

ಬಿಜಾಪುರ್, ನ.26- ಛತ್ತೀಸ್‍ಗಡ ರಾಜ್ಯ ಬಿಜಾಪುರ ಜಿಲ್ಲೆಯ ಮಿರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ತನಿಖಾ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದಾರೆ. ನಕ್ಸಲ್ ಬಾತ ಈ ಭಾಗದಲ್ಲಿ ಸಿಆರ್‍ಪಿಎಫ್, ಡಿಆರ್‍ಐ ಮತ್ತು ಎಸ್‍ಟಿಎಫ್ ಪಡೆಗಳು ಜಂಟಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದವು. ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುವ ವೇಳೆ ನಕ್ಸಲರು ಎದುರಾಗಿದ್ದು ಗುಂಡಿನ ಕಾಳಗದಲ್ಲಿ ಮೂವರು ಹತ್ಯೆಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಸ್.ಪಿ.ಆಂಜನೇಯ ವರ್ಸೆನಿ ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ. […]

ಮೋದಿ ರ‍್ಯಾಲಿ ಮೇಲೆ ಡ್ರೋನ್ ಹಾರಾಟ : ಮೂವರ ಬಂಧನ

ಅಹಮದಾಬಾದ್,ನ.25- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರ‍್ಯಾಲಿ ನಡೆಸಿದ್ದ ಪ್ರದೇಶದಲ್ಲಿ ಕ್ಯಾಮೆರಾ ಅಳವಡಿಸಿದ ಡ್ರೋನ್ ಹಾರಾಟ ನಡೆಸಿದ ಆರೋಪದ ಮೇಲೆ ಮೂವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಮೋದಿ ರ‍್ಯಾಲಿ ನಡೆಸಿದ್ದ ಅಹಮದಾಬಾದ್ ಜಿಲ್ಲೆಯ ಬಾವ್ಲಾ ಗ್ರಾಮದಲ್ಲಿ ಕ್ಯಾಮೆರಾ ಅಳವಡಿಸಿದ ಡ್ರೋನ್ ಹಾರಾಟ ನಡೆಸಿದ ಆರೋಪದ ಮೇಲೆ ಮೂವರನ್ನು ಬಂಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಬಾವ್ಲಾ ಗ್ರಾಮದಲ್ಲಿ ಯಾರು ಡ್ರೋಣ್ ಹಾರಾಟ ನಡೆಸಬಾರದು ಎಂದು ಜಿಲ್ಲಾಧಿಕಾರಿಗಳು ನಿಷೇಧ ವಿದಿಸಿದ್ದರು ಕೆಲವರು ಡ್ರೋನ್ ಹಾರಾಟ […]

ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗಳಿಗೆ ಪಂಗನಾಮ ಹಾಕಿದ್ದ ಆರೋಪಿಗಳ ಬಂಧನ

ಬೆಂಗಳೂರು, ನ.23- ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನಕಲಿ ಚಿನ್ನಾಭರಣಗಳನ್ನು ಅಡಮಾನವಿಟ್ಟು ಕೋಟ್ಯಾಂತರ ರೂ. ಸಾಲ ಪಡೆದುಕೊಂಡು ಬ್ಯಾಂಕ್ಗಳಿಗೆ ವಂಚಿಸಿದ್ದ ಮೂವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರುಣ್ ರಾಜು ಕಾನಡೆ(30), ಸತ್ಯಾನಂದ ಅಲಿಯಾಸ್ ಸತ್ಯ(28) ಮತ್ತು ದತ್ತಾತ್ರೇಯ ಬಾಕಳೆ ಅಲಿಯಾಸ್ ಯಶ್(28) ಬಂಧಿತ ಆರೋಪಿಗಳು. ಕಳೆದ ಸೆಪ್ಟೆಂಬರ್ 23ರಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ವಿಜಯನಗರ ವ್ಯಾಪ್ತಿಯ ಬ್ಯಾಂಕ್ ಆಪ್ ಬರೋಡಾ ಶಾಖೆಗೆ ಸತ್ಯಾನಂದ ಮತ್ತು ಜಯಲಕ್ಷ್ಮೀ ಎಂಬುವರು ಸುಮಾರು 235.6 ಗ್ರಾಂ ನಕಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಬಂದಿದ್ದು ಜಯಲಕ್ಷ್ಮೀ […]

ರಾಜ್ಯದಲ್ಲಿ ಮತ್ತೆ ಮೂರು ದಿನ ಮಳೆ ಸಾಧ್ಯತೆ

ಬೆಂಗಳೂರು,ನ.21- ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಪ್ರಾರಂಭವಾಗುವ ಸೂಚನೆಗಳಿವೆ. ಬಂಗಾಳಕೊಲ್ಲಿ ಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಮೂರು ದಿನಗಳು ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಮೂರು ನಾಲ್ಕು ದಿನಗಳ ಕಾಲ ಕಂಡು ಬರಲಿದೆ. ನಾಳೆಯಿಂದ ನ. 24ರವರೆಗೆ ರಾಜ್ಯದ ಪೂರ್ವಭಾಗದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ಟ್ರಕ್ ಹರಿದು 12 ಮಂದಿ ಸಾವು […]