ಇಂಡಿಯಾದ ನಾಯಕ ರೋಹಿತ್ ಶರ್ಮಾ ಆಸ್ಪತ್ರೆಗೆ ದಾಖಲು

ಮಿರ್‍ಪುರ್, ಡಿ.7- ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಪಂದ್ಯದ ವೇಳೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರ ಕೈ ಬೆರಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಟಾಸ್ ಗೆದ್ದು ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತು. 2ನೆ ಓವರ್‍ನಲ್ಲಿ ಮೊಹಮ್ಮದ್ ಶಿರಾಜ್ ಬೌಲಿಂಗ್‍ನಲ್ಲಿ ಬಾಂಗ್ಲಾದ ಆರಂಭಿಕ ಆಟಗಾರ ಅನಮುಲ್ ಹಕ್‍ರ ಬ್ಯಾಟ್ ಸ್ಪರ್ಶಿಸಿದ ಚೆಂಡನ್ನು ಹಿಡಿಯುವ ಭರದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಬಲಗೈನ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. […]