ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಸಚಿವ ಅನುರಾಗ್‍ಸಿಂಗ್ ಠಾಕೂರ್ ಕಿಡಿ

ನವದೆಹಲಿ,ಮಾ.10- ಕಾಶ್ಮೀರದ ಪತ್ರಿಕಾ ಸ್ವಾತಂತ್ರ್ಯದ ಕುರಿತು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ವರದಿ ದುಷ್ಕ್ರತ್ಯ ಮತ್ತು ಕಾಲ್ಪನಿಕ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಭಾರತದ ಬಗ್ಗೆ ವರದಿಯನ್ನು ಪ್ರಕಟಿಸುವಾಗ ತಟಸ್ಥತೆ ನೀತಿ ಅನುಸರಿಸುವುದನ್ನು ಬಹಳ ಹಿಂದೆಯೇ ಕೈಬಿಟ್ಟಿದೆ. ಕಾಶ್ಮೀರದ ಪತ್ರಿಕಾ ಸ್ವಾತಂತ್ರ್ಯದ ಕುರಿತು ನ್ಯೂಯಾರ್ಕ್ ಟೈಮ್ಸ್ ವ್ಯಕ್ತಪಡಿಸಿರುವ ಅಭಿಪ್ರಾಯವು ಚೇಷ್ಟೆ ಮತ್ತು ಕಾಲ್ಪನಿಕವಾಗಿದೆ, ಇದು ಭಾರತೀಯ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ವಿರುದ್ಧ ಅಪಪ್ರಚಾರವನ್ನು ಹರಡುವ ಏಕೈಕ ಉದ್ದೇಶ ಹೊಂದಿದೆ […]