ದೆಹಲಿಯಲ್ಲಿ ಶಿವಸೇನೆ ಸಂಸದರನ್ನು ಭೇಟಿ ಮಾಡಲಿರುವ ಸಿಎಂ ಶಿಂಧೆ

ನವದೆಹಲಿ, ಜು.19- ಶಿವಸೇನೆ ಸಂಸದೀಯ ಪಕ್ಷದಲ್ಲಿ ವಿಭಜನೆ ಸನ್ನಿಹಿತವಾಗುತ್ತಿರುವ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ದೆಹಲಿಯಲ್ಲಿ ಪಕ್ಷದ ಸಂಸದರನ್ನು ಭೇಟಿ ಮಾಡಲಿದ್ದಾರೆ. ಉದ್ಧವ್ ಠಾಕ್ರೆ ಅವರು ಸಲ್ಲಿಸಿರುವ 16 ಶಾಸಕರ ವಿರುದ್ಧದ ಅನರ್ಹತೆ ಅರ್ಜಿ ವಿಚಾರಣೆ ನಾಳೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿದೆ. ಇದರ ಕುರಿತು ಚರ್ಚೆಗೆ ದೆಹಲಿಗೆ ಆಗಮಿಸಿರುವ ಏಕನಾಥ್ ಶಿಂಧೆ, ಶಿವಸೇನೆಯ ಸಂಸದರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಶಿವಸೇನೆ ಮುಖ್ಯ ನಾಯಕರಾಗಿ ಪಟ್ಟಕ್ಕೇರಿದ ದಿನದ ಬಳಿಕ ಶಿಂಧೆ ಮಂಗಳವಾರ […]