ಕಳಪೆ ಶೌಚಾಲಾಯ ನಿರ್ಮಿಸಿದ್ದರೆ ಕಠಿಣ ಕ್ರಮ

ಬೆಂಗಳೂರು,ಮಾ.9- ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಯಾವುದಾದರೂ ಗ್ರಾಮಗಳಲ್ಲಿ ಕಳಪೆಯಾಗಿ ಶೌಚಾಲಯಗಳನ್ನು ನಿರ್ಮಿಸಿದ್ದರೆ ಅಂಥವರ ಮೇಲೆ ತಕ್ಷಣವೇ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು. ವಿಧಾನಸಭೆಯಲ್ಲಿಂದು ಶಾಸಕ ಬಂಡೆಪ್ಪ ಕಾಶಂಪುರ್ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಪ್ರಧಾನಿ ನರೇಂದ್ರಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ಗ್ರಾಮೀಣ ಭಾಗದ ಮಹಿಳೆಯರು ಬೀದಿಗೆ ಬಂದು ಬರ್ಹಿದೆಸೆಗೆ ಹೋಗಬಾರದು ಎಂದು ಈ ಯೋಜನೆಯನ್ನು ಆರಂಭಿಸಿದ್ದಾರೆ. ಚಾಲಯಗಳನ್ನು ಸರಿಯಾಗಿ ನಿರ್ಮಾಣ ಮಾಡದ ಅಕಾರಿಗಳ ವಿರುದ್ಧ […]