ನಾಲಿಗೆ ಕ್ಲೀನ್ ಮಾಡದ್ದಿದರೆ ಯಾವೆಲ್ಲ ಕಾಯಿಲೆ ಬರುತ್ತೆ ಗೊತ್ತೇ..?

ನಾವು ಆರೋಗ್ಯವಾಗಿರಲು ದೇಹದ ಎಲ್ಲಾ ಅಂಗಗಳು ಕ್ಲೀನ್ ಆಗಿರಬೇಕು. ಅದೇರೀತಿ ಬಾಯಿ, ಹಲ್ಲು, ನಾಲಿಗೆ ಕೂಡ  ಸ್ವಚ್ಚವಾಗಿರಬೇಕು.  ಬಾಯಿಯ ಆರೋಗ್ಯಕ್ಕೆ ಮಾತ್ರವಲ್ಲ, ಶರೀರದ ಆರೋಗ್ಯಕ್ಕೂ ನಾಲಿಗೆಯನ್ನು ಸ್ವಚ್ಛಗೊಳಿಸಿವುದು ಅತ್ಯವಶ್ಯಕ. ದಿನನಿತ್ಯ ಬೆಳಗ್ಗೆ ಹಲ್ಲುಜ್ಜುವ ಅಭ್ಯಾಸವಿದ್ದರೂ, ಕೆಲವರು ನಾಲಿಗೆ ಸ್ವಚ್ಛಗೊಳಿಸುವಿಕೆಯನ್ನು ಕಡೆಗಣಿಸುತ್ತಾರೆ. ಸಾಮಾನ್ಯವಾಗಿ ನಾಲಿಗೆಯನ್ನು ಕ್ಲೀನ್ ಮಾಡದಿದ್ದರೆ ತೆಳುವಾದ ಬಿಳಿ ಪದರವು ಮೂಡಿರುತ್ತದೆ. ಇಂತಹ ಪದರವೇ ಮುಂದೆ ಅಪಾಯಕಾರಿಯಾಗಲಿದೆ ಎಂದರೆ ನಂಬಲೇಬೇಕು. # ನಾಲಿಗೆಯನ್ನು ಕ್ಲೀನ್ ಮಾಡದೇ, ನಾವೆಷ್ಟು ಬಾರಿ ಹಲ್ಲುಜ್ಜಿದರೂ ಬಾಯಿಯ ದುರ್ಗಂಧ ಹಾಗೇ ಉಳಿದು ಬಿಡುತ್ತದೆ. […]