ಕಳ್ಳನನ್ನು ಹಿಡಿದುಕೊಟ್ಟ ಖಾಲಿ ವಾಟರ್ ಬಾಟಲ್

ಥಾಣೆ,ಜ.15- ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಗೋಡೌನ್ನಿಂದ 99.44 ಲಕ್ಷ ರೂಪಾಯಿ ಮೌಲ್ಯದ ಉಡುಪುಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಅಲ್ಲಿ ದೊರೆತ ಖಾಲಿ ಮಿನರಲ್ ವಾಟರ್ ಬಾಟಲಿಗಳ ಸಹಾಯದಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಜನವರಿ 8 ರಂದು ಭಿವಂಡಿ ಪಟ್ಟಣದಲ್ಲಿರುವ ಗೋಡೌನ್ನಲ್ಲಿ ಕಳ್ಳತನ ನಡೆದಿತ್ತು. ಪೊಲೀಸ್ ತನಿಖಾ ತಂಡವು ಪ್ರದೇಶದ ಸಿಸಿಟಿವಿ ದೃಶ್ಯಗಳು ಮತ್ತು ಗುಪ್ತಚರ ಇನ್ಪುಟ್ಗಳು ಸೇರಿದಂತೆ ವಿವಿಧ ಮೂಲಗಳನ್ನು ಪರಿಶೀಲಿಸಿತ್ತು. ಅಪರಾಧ ನಡೆದ ಸ್ಥಳದಲ್ಲಿ ಮಿನರಲ್ ವಾಟರ್ನ ಖಾಲಿ ಬಾಟಲಿಗಳು ಮತ್ತು ಚಿಪ್ಸ್ ಪ್ಯಾಕೆಟ್ಗಳು ಪತ್ತೆಯಾಗಿವೆ. […]