ಚೋಲಾದೋರಾ ಧರಿಸಿ ಕೇದಾರನಾಥನ ದರ್ಶನ ಪಡೆದ ಪ್ರಧಾನಿ ಮೋದಿ

ರುದ್ರಪ್ರಯಾಗ್, ಅ.21- ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮುಂಜಾನೆ ಉತ್ತರಾಖಂಡ್‍ನ ಕೇದಾರನಾಥ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಉಡುಗೆ ಚೋಲಾದೋರಾ ಧರಿಸಿ ವಿಶೇಷ ಪೂಜೆ ಸಲ್ಲಿಸಿದರು. ಎರಡು ದಿನಗಳ ಭೇಟಿಗಾಗಿ ಉತ್ತರಾಖಂಡ್‍ಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗೌರಿಕುಂಡ ಕೇದಾರನಾಥ ನಡುವಿನ 9.7ಕಿ.ಮೀ. ಉದ್ದದ ರೋಪ್‍ವೇ ಯೋಜನೆ, ರಾಷ್ಟ್ರೀಯ ಹೆದ್ದಾರಿ-7ರ ವಿಸ್ತರಣೆ, ಋಷಿಕೇಷ್, ಜೋಷಿಮಠ್, ಬದ್ರಿನಾಥ್, ಡೆಹ್ರಾಡೂನ್, ಚಂಡೀಗಢ ನಡುವಿನ ರಾಷ್ಟ್ರೀಯ ಹೆದ್ದಾರಿ-107ರಿಂದ ರುದ್ರಪ್ರಯಾಗ್ ಮತ್ತು ಗೌರಿಕುಂಡ ನಡುವೆ ರಸ್ತೆ ಸುಧಾರಣೆಗೆ ಕಾಮಗಾರಿ […]