ಸಂಚಾರಿ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ ಶಾಲಾ ಮಕ್ಕಳು

ಬೆಂಗಳೂರು, ಜ. 31- ನಗರದ ಸಿಎಂಸಿಎ ಸಂಸ್ಥೆ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ ನಮ್ಮ ಬೆಂಗಳೂರು ಸಂಚಾರಿ ಪೊಲೀಸ್ ಉತ್ಸವದ 15ನೇ ವರ್ಷದ ಅಂಗವಾಗಿ ಶಾಲಾ ಮಕ್ಕಳು ಸಂಚಾರಿ ಪೊಲೀಸರಿಗೆ ಗುಲಾಬಿ ಹೂ ನೀಡಿ ಧನ್ಯವಾದ ಸಲ್ಲಿಸಿದರು. ಸಂಚಾರಿ ಪೊಲೀಸ್ ಉತ್ಸವವು ಮಕ್ಕಳಲ್ಲಿ ಕೃತಜ್ಞತೆಯ ಸಂಸ್ಕøತಿ ಮತ್ತು ಅನುಭೂತಿಯನ್ನು ಬೆಳೆಸಲು ಸಿಎಂಸಿಎ ಪ್ರಾರಂಭಿಸಿರುವ ಒಂದು ಕಾರ್ಯಕ್ರಮವಾಗಿದೆ. ಅನೇಕ ಸಂದರ್ಭಗಳಲ್ಲಿ ಸಮುದಾಯಕ್ಕಾಗಿ ಸಂಚಾರಿ ಪೊಲೀಸರು ಮಾಡುವ ಬಹು ಮುಖ್ಯ ಸೇವೆಗಳು ಗುರುತಿಸಲ್ಪಡದೇ ಹೋಗುತ್ತವೆ. ಹಾಗಾಗಿ ಸಂಚಾರಿ ಪೊಲೀಸರೊಂದಿಗೆ ಮಾತುಕತೆ ನಡೆಸುವ […]