ಡ್ರೋಣ್ ಮೂಲಕ ಆರೋಗ್ಯ ಸೇವೆ ಪೂರೈಕೆಗೆ ಅರುಣಾಚಲ ಪ್ರದೇಶದಲ್ಲಿ ಪ್ರಯೋಗ ಆರಂಭ

ನವದೆಹಲಿ, ಆ.15- ಗುಡ್ಡಗಾಡು ಮತ್ತು ಗ್ರಾಮೀಣ ಭಾಗಕ್ಕೆ ಡ್ರೋಣ್‍ಗಳ ಮೂಲಕ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಾಯೋಗಿಕ ಪರೀಕ್ಷಾ ಹಾರಾಟವನ್ನು ಅರುಣಾಚಲ ಪ್ರದೇಶದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ದಿನದಂದು ಆರಂಭಿಸಲಾಗಿದೆ. 76ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪಶ್ಚಿಮ ಕಮೆಂಗ್ ಜಿಲ್ಲೆಯ ಸೆಪ್ಪಾ ನಗರದಲ್ಲಿ ಈ ಸೇವೆಯನ್ನು ರೆಡ್‍ವಿಂಗ್ ಎಂಬ ನವೋದ್ಯಮ ಲೋಕಾರ್ಪಣೆ ಮಾಡಿದೆ. ಹೈಬ್ರೀಡ್ ಮಾದರಿಯಲ್ಲಿ ಡ್ರೋಣ್‍ಗಳು ಲಂಬಾಕಾರದಲ್ಲಿ ಮೇಲೇರುವುದು ಮತ್ತು ಇಳಿಯುವ ವ್ಯವಸ್ಥೆಯನ್ನು ಕಲ್ಲಿಸಲಾಗಿದೆ. ರಾಜ್ಯ ಸರ್ಕಾರದ ವಿಶ್ವ ಆರ್ಥಿಕ ವೇದಿಕೆಯ ಸಹಯೋಗದಲ್ಲಿ ಈ ಸೇವೆಯನ್ನು ಒದಗಿಸಲಾಗುತ್ತಿದೆ. […]