ಪತ್ನಿ ಮೇಲೆ ಹಲ್ಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ

ಬೆಂಗಳೂರು,ಮಾ.19- ಕುಡಿಯಬೇಡಿ ಕೆಲಸಕ್ಕೆ ಹೋಗಿ ಎಂದ ಪತ್ನಿಯ ತಲೆಯನ್ನು ಗೊಡೆಗೆ ಜಜ್ಜಿದ ಪತಿರಾಯ ತಾನೂ ಕೂಡ ಕುತ್ತಿಗೆಗೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆರ್‍ಆರ್‍ನಗರದಲ್ಲಿ ನಡೆದಿದೆ.ಮರೆಯಲ್ಲಿ ನಿಂತು ಅಪ್ಪ-ಅಮ್ಮನ ಜಗಳ ನೋಡುತ್ತಿದ್ದ ಮಗ ಮನೆಯಿಂದ ಓಡಿ ಹೋಗಿದ್ದಾನೆ. ಸದ್ಯ ದಂಪತಿ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿ -ಪತ್ನಿ ಇಬ್ಬರೂ ಸಾಫ್ಟ್‍ವೇರ್ ಇಂಜಿನಿಯರ್‍ಗಳಾಗಿದ್ದು ಕುಡಿತದಿಮದ ಸಂಸಾರ ಸರ್ವನಾಶ ಎಂಬ ಮಾತಿಗೆ ಈ ಘಟನೆ ಪೂರಕವಾಗಿದೆ. ಮೂಲತಃ ತುಮಕೂರು ನಿವಾಸಿಯಾದ ಹರ್ಷ ಹಾಗೂ ಸುಧಾರಾಣಿ ಮದುವೆಯಾಗಿದ್ದು […]

ಕೈಕೊಟ್ಟ ಪ್ರೇಯಸಿಯ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ

ಬೆಂಗಳೂರು, ಮಾ. 15- ಪ್ರೀತಿಸಿದ ಯುವತಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾಗಿರುವ ವಿಷಯ ತಿಳಿದು ಕೋಪಗೊಂಡ ಪ್ರಿಯಕರ ಆಕೆಯ ಮನೆಗೆ ನುಗ್ಗಿ ಅತ್ಯಾಚಾರವೆಸಗಿ ಉಸಿರು ಗಟ್ಟಿಸಿ ಕೊಲೆ ಮಾಡಿ ನಂತರ ಆತನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ. ವಿಲ್ಸನ್‍ಗಾರ್ಡ್‍ನ್‍ನ ವಿನಾಯಕನಗರದ 6ನೆ ಕ್ರಾಸ್ ನಿವಾಸಿ ಶಾಲಿನಿ(23) ಕೊಲೆಯಾದ ಯುವತಿ. ಈಕೆಯ ಪ್ರಿಯಕರ ಮನೋಜ್ ಆತ್ಮಹತ್ಯೆಗೆ ಯತ್ನಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೆಪಿ ಅಗ್ರಹಾರದ ನಿವಾಸಿ ಮನೋಜ್ ಎಂಬಾತ ಶಾಲಿನಿಯನ್ನು ಪ್ರೀತಿಸುತ್ತಿದ್ದನು. ಈ ನಡುವೆ ಶಾಲಿನಿಗೆ ಮನೆಯಲ್ಲಿ ಬೇರೆ ಯುವಕನೊಂದಿಗೆ […]