ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಪೋಟ, ಇಬ್ಬರ ಸಾವು, ಹಲವರಿಗೆ ಗಾಯ

ಕಂಟೈ,ಡಿ.3- ಪಶ್ಚಿಮ ಬಂಗಾಳದ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಬಹಿರಂಗ ರ‍್ಯಾಲಿ ನಡೆಯುವ ಸಮೀಪದಲ್ಲೇ ನಿನ್ನೆ ತಡ ರಾತ್ರಿ ಬಾಂಬ್ ಸ್ಪೋಟ ಸಂಭವಿಸಿದ್ದು, ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಪುರ್ಬಾಮೆದಿನಿಪುರ್ ಜಿಲ್ಲೆಯ ಭೂಪತಿನಗರದ ಮನೆಯೊಂದರಲ್ಲಿ ನಿನ್ನೆ ರಾತ್ರಿ 1.15ರ ಸುಮಾರಿಗೆ ಸ್ಪೋಟ ಸಂಭವಿಸಿದೆ. ಶನಿವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದಾಗ ಇಬ್ಬರ ಶವಗಳು ಪತ್ತೆಯಾಗಿವೆ. ಹಲವು ಮಂದಿ ಗಾಯಗೊಂಡಿದ್ದಾರೆ. ಸ್ಪೋಟಕ್ಕೆ ನಿಖರವಾದ ಕಾರಣ ಈವರೆಗೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ. ಶಕ್ತಿಶಾಲಿ ಸ್ಪೋಟದಿಂದ ಮಣ್ಣಿನ ಮನೆಯ ಧ್ವಂಸವಾಗಿದ್ದು, […]