ಆಂದ್ರದಲ್ಲಿ ಸದ್ದು ಮಾಡುತ್ತಿರುವ ಪ್ರತಿಷ್ಠಿತ ಕುಟುಂಬಗಳ ಹೆಣ್ಣು ಮಕ್ಕಳು

ಹೈದರಾಬಾದ್,ಡಿ.10- ತೆಲುಗು ನಾಡು ತೆಲಂಗಾಣದಲ್ಲಿ ಎರಡು ಪ್ರತಿಷ್ಠಿತ ಕುಟುಂಬಗಳ ಹೆಣ್ಣುಮಕ್ಕಳ ಸುದ್ದಿಗಳು ಕಳೆದ ಎರಡು ವಾರಗಳಿಂದಲೂ ನಿರಂತರವಾಗಿ ಪತ್ರಿಕೆಗಳ ಮುಖ ಪುಟಗಳಲ್ಲಿ ರಾರಾಜಿಸುತ್ತಿವೆ. ದೆಹಲಿಯ ಅಬಕಾರಿ ನೀತಿ ಅಕ್ರಮಗಳ ಪ್ರಕರಣದಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ವಿಧಾನಪರಿಷತ್ ಸದಸ್ಯ ಕವಿತಾ ಅವರ ಹೆಸರು ಕೇಳಿಬಂದಿದೆ. ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಹೇಳಿಕೆ ದಾಖಲಿಸಿದ್ದಾರೆ. ಕವಿತಾ ಅವರ ವಿರುದ್ಧ ಇತ್ತೀಚೆಗೆ ರಾಜಕೀಯ ಟೀಕೆಗಳು ಹೆಚ್ಚಾಗಿವೆ. ಮತ್ತೊಂದು ಕಡೆ ಅವಿಭಜಿತ […]