ಬಿಜೆಪಿ ಸೇರುವಂತೆ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದ್ದ ಮೂವರ ಬಂಧನ
ಹೈದರಬಾದ್,ಅ.27- ತೆಲಂಗಾಣದ ಆಡಳಿತ ಪಕ್ಷದ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಕುದುರೆ ವ್ಯಾಪಾರ ನಡೆಸಲು ಯತ್ನಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಫಾರಂಹೌಸ್‍ನಿಂದ ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ. ಹರಿಯಾಣದ ಫರೀದಾಬಾದ್ನಲ್ಲಿ ಅರ್ಚಕರಾಗಿರುವ ಸತೀಶ್ ಶರ್ಮಾ (33), ತಿರುಪತಿಯಲ್ಲಿ ಮಠವೊಂದರ ಪೀಠಾಪತಿ ಡಿ.ಸಿಂಹಯಾಜಿ (45), ಸ್ವಾಮೀಜಿಯ ಭಕ್ತರಾದ ರೋಹಿತ್ ರೆಡ್ಡಿ ಹಾಗೂ ಸರೂರ್ನಗರದ ಉದ್ಯಮಿ ನಂದಕುಮಾರ್ (48) ಬಂಧಿತರು. ಶಾಸಕರಾದ ಪಿ.ರೋಹಿತ್ ರೆಡ್ಡಿ, ಭೀರಾಮ್ ಹರ್ಷವರ್ಧನ್ ರೆಡ್ಡಿ, ಪಿ.ರೇಗಾ ಕಾಂತ ರಾವ್, ಗುವ್ವಾಲಾ ಬಾಲರಾಜು ಅವರು ತಮಗೆ ಬಿಜೆಪಿ […]
ತೆಲಂಗಾಣದಲ್ಲಿ ಕರ್ನಾಟಕದ ವಿರುದ್ಧ ಆಕ್ಷೇಪಾರ್ಹ ಫಲಕ: ಸಿಎಂ ಬೊಮ್ಮಾಯಿ ಆಕ್ರೋಶ
ಬೆಂಗಳೂರು,ಸೆ.18- ಶೇಕಡಾ 40% ಸರ್ಕಾರಕ್ಕೆ ಸುಸ್ವಾಗತ ಎಂದು ಹೈದರಾಬಾದ್‍ನಲ್ಲಿ ಹಾಕಿದ್ದ ಆಕ್ಷೇಪಾರ್ಹ ಫಲಕಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿ ಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂತಹ ಘಟನೆಗಳಿಂದ ಎರಡೂ ರಾಜ್ಯಗಳ ನಡುವೆ ಸಂಬಂಧ ಹದಗೆಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ತೆಲಂಗಾಣದ ಭ್ರಷ್ಟಾಚಾರವನ್ನು ಕರ್ನಾಟಕದಲ್ಲಿ ಪ್ರಸ್ತಾಪಿಸಿದರೆ ಹೇಗಿರುತ್ತದೆ ಎಂದು ಅವರು ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರಿಗೂ ಎಚ್ಚರಿಕೆ ಕೊಟ್ಟರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ವ್ಯವಸ್ಥಿತ ಷಡ್ಯಂತ್ರ. ಇಂಥ ಬೆಳವಣಿಗೆಗಳಿಂದ ಕರ್ನಾಟಕ ಮತ್ತು ತೆಲಂಗಾಣ ನಡುವೆ ರಾಜಕೀಯ ಸಂಬಂಧಗಳು […]