ಕನ್ನಡ ಅನುಷ್ಠಾನ ವಿಧೇಯಕ ಯಥಾವತ್ ಜಾರಿಗೆ ನಾಗಾಭರಣ ಒತ್ತಾಯ

ಬೆಂಗಳೂರು, ಅ.11- ಕನ್ನಡ ಅನುಷ್ಠಾನಕ್ಕಾಗಿ ರೂಪಿಸಲಾಗಿರುವ ವಿಧೇಯಕವನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಉಳಿಸಲು ಏನು ಮಾಡಬೇಕು ಎಂಬ ಕುರಿತು ಪ್ರಾಧಿಕಾರ ಒಂದು ವರ್ಷದಿಂದ ಅಧ್ಯಯನ ನಡೆಸಿದೆ. ಅದರ ಆಧಾರದ ಮೇಲೆ ವಿಧೇಯಕ ರೂಪಿಸಲಾಗಿದೆ. ಕರಡು ವಿಧೇಯಕವನ್ನ ಕನ್ನಡ ಸಂಸ್ಕೃತಿ ಇಲಾಖೆಗೆ ನೀಡಲಾಗಿತ್ತು . ಅಲ್ಲಿಯೂ ಸಭೆಗಳನ್ನು ನಡೆಸಲಾಗಿದೆ. ಆದರೆ ಕನ್ನಡ ಸಂಸ್ಕøತಿ ಇಲಾಖೆಯಿಂದಲೇ ಆಕ್ಷೇಪಗಳು ಕೇಳಿ ಬಂದಿವೆ. ಹೊಸ ನಿಯಮ ರಚನೆಯ […]