ಎಸ್‍ಸಿಎಸ್‍ಪಿ-ಟಿಎಸ್‍ಪಿ ಅನುದಾನ ಬಳಕೆಗೆ ನಿರಾಸಕ್ತಿ
ಬೆಂಗಳೂರು,ಆ.25- ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಜಾರಿಗೆ ತರಲಾಗಿರುವ ಎಸ್‍ಸಿಎಸ್‍ಪಿ -ಟಿಎಸ್‍ಪಿ ಅನುದಾನ ಬಳಕೆಯಲ್ಲಿ ರಾಜ್ಯ ಸರ್ಕಾರದ ನಿರಾಸಕ್ತಿ ಎದ್ದು ಕಾಣುತ್ತಿದೆ. 2022-23ರ ಸಾಲಿನ ಮೊದಲ ನಾಲ್ಕು ತಿಂಗಳಲ್ಲಿನ ಪ್ರಗತಿ ನಿರಾಶಾದಾಯಕವಾಗಿದೆ. 2022-23 ಸಾಲಿನಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟುಗಳ ಉಪಹಂಚಿಕೆ (ಎಸ್‍ಸಿಎಸ್‍ಪಿ-ಟಿಎಸ್‍ಪಿ)ಯಲ್ಲಿ ಒಟ್ಟು 31,635.54 ಕೋಟಿ ರೂ. ಹಂಚಿಕೆ ಮಾಡಿದೆ. ಈ ಪೈಕಿ ಎಸ್‍ಸಿಎಸ್‍ಪಿಗೆ 22,474.01 ಕೋಟಿ ರೂ. ಮತ್ತು ಟಿಎಸ್‍ಪಿಗೆ 9,161.53 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ […]