ಗರ್ಭಿಣಿ ಮತ್ತು ಅವಳಿ ಮಕ್ಕಳ ಸಾವು : ರಾಜಕೀಯ ಒತ್ತಡಕ್ಕೆ ವೈದ್ಯೆ ಅಮಾನತು..?

ತುಮಕೂರು, ನ.6- ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯದಿಂದ ಗರ್ಭಿಣಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣದಲ್ಲಿ ವೈದ್ಯೆಯ ಪಾತ್ರವಿಲ್ಲದಿದ್ದರೂ ವಿನಾಕಾರಣ ಅಮಾನತು ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಅಮಾನತುಗೊಂಡಿರುವ ವೈದ್ಯೆ ಡಾ.ಉಷಾ ಸರ್ಕಾರಿ ವೈದ್ಯಾಧಿಕಾರಿ ಗಳ ಸಂಘಕ್ಕೆ ಪತ್ರ ಬರೆದಿದ್ದು, ರಾಜಕೀಯ ಒತ್ತಡಗಳನ್ನು ತಪ್ಪಿಸಿಕೊಳ್ಳಲು ನನ್ನನ್ನು ಅಮಾನತು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನ.5ರಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ತುಮಕೂರು ಜಿಲ್ಲಾಧ್ಯಕ್ಷರಿಗೆ ಈ ಕುರಿತು ಪತ್ರ ಬರೆದಿರುವ ಡಾ.ಉಷಾ, ನ.2ರಂದು ಬೆಳಗ್ಗೆ 9.30 ರಿಂದ ಸಂಜೆ 5.30ರ ವರೆಗೆ […]