ಜ.14ರವರೆಗೆ ತುಮಕೂರು ರಸ್ತೆ ಮೇಲ್ಸೇತುವೆ ಬಂದ್ ಮುಂದುವರಿಕೆ

ಟಿ.ದಾಸರಹಳ್ಳಿ, ಜ.7- ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗೊರಗುಂಟೆ ಪಾಳ್ಯದಿಂದ ಅಂಚೆಪಾಳ್ಯದವರೆಗೆ ನಿರ್ಮಾಣ ವಾಗಿರುವ ಮೇಲು ಸೇತುವೆಯಲ್ಲಿ ದೋಷ ಕಂಡುಬಂದಿದ್ದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯಕ್ಕಾಗಿ ಮಾಡಲಾಗಿದ್ದ ಬಂದ್‍ನ್ನು ಜ.14ರವರೆಗೆ ಮುಂದುವರೆಸಲಾಗಿದೆ. ಆರಂಭದಲ್ಲಿ ಡಿ.25 ರಿಂದ ಡಿ.31ರವರೆಗೆ ಒಂದು ವಾರ ಮಾತ್ರ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಕಾರದವರು ತಿಳಿಸಿದ್ದರು. ಹೊಸ ವರ್ಷ ಆರಂಭವಾಗಿ ವಾರ ಕಳೆದರೂ ಫ್ಲೈಓವರ್ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ. ಸದ್ಯಕ್ಕೆ ಮುಕ್ತವಾಗುವ ಲಕ್ಷಣಗಳು ಕಾಣುತ್ತಿಲ್ಲ . ಅಲ್ಲದೆ ಜ.14ರವರೆಗೆ ಫ್ಲೈಓವರ್ ಬಂದ್ ಮುಂದುವರಿಯಲಿದೆ ಎಂದು […]