ಅದೃಷ್ಟಕ್ಕಾಗಿ ನರಿ ಸಾಕಿದ್ದ ವ್ಯಕ್ತಿ ಅರೆಸ್ಟ್

ತುಮಕೂರು, ಫೆ.28- ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟ ಒಲಿಯುತ್ತದೆ ಎಂದು ಕೆಲವರು ಜೋಡಿ ನರಿಗಳಫೋಟೋಗಳನ್ನು ಮನೆಯಲ್ಲಿಟ್ಟುಕೊಳ್ಳುತ್ತಿದ್ದನ್ನು ನೋಡಿದ್ದೇವೆ. ಆದರೆ, ಇನ್ನೊಬ್ಬ ಮೂಢನಂಬಿಕೆಗೆ ಜೋತುಬಿದ್ದು ಜೀವಂತ ನರಿಯನ್ನು ಕೋಳಿಫಾರಂನಲ್ಲಿ ಸಾಕಿ ಬಂಧನಕ್ಕೊಳಗಾಗಿದ್ದಾನೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮದ ನಿವಾಸಿ ಲಕ್ಷ್ಮಿಕಾಂತ್ ಎಂಬುವವರು ತನ್ನ ಕೋಳಿಫಾರಂನಲ್ಲಿ ನರಿ ಸಾಕಿರುವುದರ ಬಗ್ಗೆ ಬಂದ ಮಾಹಿತಿ ಮೇರೆಗೆ ಸಿಐಡಿ ಸಂಚಾರ ಅರಣ್ಯ ಘಟಕದ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ನಾಳೆಯಿಂದ ಸರ್ಕಾರಿ ಕಚೇರಿಗಳು ಬಂದ್..? […]
ಲೋಕ್ ಅದಾಲತ್ ನಲ್ಲಿ ಒಂದಾದ ವಿಚ್ಛೇದನಕ್ಕೆ ಮುಂದಾಗಿದ್ದ 14 ದಂಪತಿಗಳು

ತುಮಕೂರು,ಫೆ.12- ಸಣ್ಣ ಪುಟ್ಟ ವಿಚಾರಗಳಿಂದ ಬೇಸರಗೊಂಡು ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಗಳನ್ನು ಲೋಕ ಅದಾಲತ್ ಒಂದುಗೂಡಿಸಿತು. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ ಇಂದು ನಡೆದ ಲೋಕ್ ಅದಾಲತ್‍ನಲ್ಲಿ ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯ, ಪಾವಗಡ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ ನ್ಯಾಯಾೀಧಿಶರು ದಂಪತಿಗಳಿಗೆ ಬುದ್ಧಿ ಹೇಳಿ, ಮನವೊಲಿಸಿದ ಪರಿಣಾಮವಾಗಿ 14 ಜೋಡಿಗಳು ಮತ್ತೆ ಒಂದುಗೂಡಿದರು. ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಹಾರ ಬದಲಿಸಿ 7 ದಂಪತಿಗಳನ್ನು ಒಂದು ಮಾಡಿ ಮಾತನಾಡಿದ […]
ಕಲ್ಪತರು ನಾಡಿಗೂ ಕಾಲಿಟ್ಟ ಧರ್ಮದಂಗಲ್

ತುಮಕೂರು,ಫೆ.2- ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಪರ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಕರಾವಳಿಯಲ್ಲಿದ್ದ ಧರ್ಮದಂಗಲ್ ಕಲ್ಪತರು ನಾಡಿಗೆ ಕಾಲಿಟ್ಟಿದೆ. ಗುಬ್ಬಿಯಪ್ಪನ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮುಜರಾಯಿ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನದಲ್ಲಿ ಕಾನೂನಿನಂತೆ ನೂರು ಮೀಟರ್ ವ್ಯಾಪ್ತಿಯೊಳಗೆ ಅನ್ಯ ಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮನವಿ ಮಾಡಿವೆ. ಫೆ.4ರಂದು ಘೋಷಿತ ಜೆಡಿಎಸ್ ಅಭ್ಯಥಿಗಳ […]
ವರ್ಷಾಂತ್ಯಕ್ಕೆ ಮೈಸೂರು-ತುಮಕೂರು ಡಬ್ಬಲ್ ಡೆಕ್ಕರ್ ಬಸ್ ಸೇವೆ

ಬೆಂಗಳೂರು,ಜ.31- ಮೈಸೂರು ಮತ್ತು ತುಮಕೂರಿನ ನಾಗರಿಕರು ಈ ವರ್ಷದ ಅಂತ್ಯದ ವೇಳೆಗೆ ಡಬಲ್ ಡೆಕ್ಕರ್ ಬಸ್‍ಗಳಲ್ಲಿ ಪ್ರಯಾಣಿಸುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಾಯೋಗಿಕ ಕಾರ್ಯಕ್ರಮದಡಿ ಮೈಸೂರು ಮತ್ತು ತುಮಕೂರಿನಲ್ಲಿ ನಗರದೊಳಗಿನ ಪ್ರಯಾಣಕ್ಕಾಗಿ ಡಬಲ್ ಡೆಕ್ಕರ್, ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‍ಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಈಗಾಗಲೇ ಮೈಸೂರಿನಲ್ಲಿ ಅಂಬಾರಿ ಎಂಬ ಡಬಲ್ ಡೆಕ್ಕರ್ ಬಸ್ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸೇವೆಯಲ್ಲಿದೆ. ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಸೇವೆ ಒದಗಿಸುವ ಉದ್ದೇಶದಿಂದ ಪ್ರತಿ ನಗರಕ್ಕೆ […]
ನಿತ್ಯ ಜಗಳ ಮಾಡುತ್ತಿದ್ದ ಪತ್ನಿಯನ್ನು ಕೊಂದು ಕೆರೆಗೆ ಎಸೆದ ಪತಿ

ತುಮಕೂರು,ಜ.30- ನಿತ್ಯ ಜಗಳ ಮಾಡುತ್ತಾಳೆ ಎಂದು ಹೆಂಡತಿಯನ್ನು ಕೊಂದು ಕೆರೆಗೆ ಹಾಕಿರುವ ಘಟನೆ ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದರ್ಶಿನಿ (26) ಕೊಲೆಯಾದ ಪತ್ನಿ. ಘಟನೆ ವಿವರ: ತುರುವೇಕೆರೆ ತಾಲೂಕಿನ ಮಾಯಸಂದ್ರದ ದೊಡ್ಡ ಕೆರೆಯ ಕುಡಿಯುವ ನೀರಿನಶುದ್ಧೀಕರಣ ಘಟಕದ ಬಳಿ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಪತಿ ವಿನಯ್ ಕುಮಾರ್‍ನನ್ನ ವಶಕ್ಕೆ ಪಡೆದು ವಿಚಾರ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆಬಂದಿದೆ. ಬೆಂಗಳೂರಿನ ಯಲಹಂಕದ ವಾಸಿಯಾಗಿರುವ ವಿನಯ್ ಹಾಗೂ ಪತ್ನಿ ದರ್ಶಿನಿ ನಾಗಮಂಗಲದ ನೆಂಟರ […]
ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಸಾವು

ತುಮಕೂರು, ಜ.25- ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸಲು ಟ್ಯಾಂಕ್‍ಗೆ ಇಳಿದ ಕಾರ್ಮಿಕರಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಿಪಟೂರು ನಗರದ ಹಿಂಡಿಸ್ಕೆರೆ ಗೇಟ್ ಬಳಿ ನಡೆದಿದೆ. ಅರಸೀಕೆರೆ ತಾಲೂಕಿನ ಹಾರ್ನಹಳ್ಳಿ ನಿವಾಸಿ ನಾಗರಾಜು (55), ತಮಿಳುನಾಡಿನ ವೇಲೂರು ಮೂಲದ ರವಿ (38) ಮೃತಪಟ್ಟ ದುರ್ದೈವಿಗಳು. ಪ್ರಸನ್ನಕುಮಾರ್ ಎಂಬುವವರಿಗೆ ಸೇರಿದ ಪೆಟ್ರೋಲ್ ಬಂಕ್‍ನ ಟ್ಯಾಂಕ್ ಸ್ವಚ್ಛಗೊಳಿಸಲು ನಾಗರಾಜ್ ಟ್ಯಾಂಕ್ ಒಳಗೆ ಇಳಿದಿದ್ದಾನೆ. ಈ ವೇಳೆ ಆಮ್ಲಜನಕದ ಕೊರತೆ ಉಂಟಾಗಿ ಉಸಿರುಗಟ್ಟಿದ್ದಾನೆ. ಟ್ಯಾಂಕ್‍ನಿಂದ ಮೇಲೆ ಬರಲು ಒದ್ದಾಡುತ್ತಿದ್ದು, ರಕ್ಷಣೆಗಾಗಿ ರವಿಯನ್ನು ಕರೆದಿದ್ದಾನೆ. ಈ […]
ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆಗೆ ಹರಿದು ಬಂದ ಭಕ್ತ ಸಾಗರ

ತುಮಕೂರು, ಜ.21- ಲೋಕಕಲ್ಯಾಣಕ್ಕಾಗಿ ದಣಿವರಿಯದೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಸಿದ್ಧಗಂಗೆಯನ್ನು ಅಕ್ಷರಶಃ ಶಿಕ್ಷಣ ಕಾಶಿಯನ್ನಾಗಿಸಿ ವಿಶ್ವವಿಖ್ಯಾತಗೊಳಿಸಿದ ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರು ಎಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ಧರಾಗಿದ್ದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 4ನೆ ಪುಣ್ಯ ಸ್ಮರಣೆಯನ್ನು ಸಿದ್ಧಗಂಗೆಯಲ್ಲಿಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆಚರಿಸಲಾಯಿತು. ಗದ್ದುಗೆಯು ವಿವಿಧ ಬಗೆಯ ಹೂವು-ಹಣ್ಣು ಹಾಗೂ ಕಬ್ಬಿನಿಂದ ಅಲಂಕೃತಗೊಂಡು ಕಂಗೊಳಿಸುತ್ತಿತ್ತು. ಮುಂಜಾನೆಯೇ ಇಷ್ಟಲಿಂಗ ಪೂಜೆ ನೆರವೇರಿಸಿದ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಲಿಂಗೈಕ್ಯ […]
ತುಮಕೂರು, ಕೋಲಾರ, ರಾಮನಗರಕ್ಕೂ ಬಿಎಂಟಿಸಿ ಬಸ್ ಸೇವೆ!

ಬೆಂಗಳೂರು,ಜ.16- ಇನ್ಮುಂದೆ ನಗರದಲ್ಲಿ ಸಂಚರಿಸುವ ಬಿಎಂಟಿಸಿ ಬಸ್‍ಗಳು ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕನಕಪುರ ಹಾಗೂ ತುಮಕೂರಿಗೂ ಸಂಚರಿಸಲಿವೆ. ನಗರದಲ್ಲಿ ಸಂಚರಿಸುತ್ತಿದ್ದ ವೋಲ್ವೋ ಬಸ್‍ಗಳಿಗೆ ಪ್ರಯಾಣಿಕರೆ ಹತ್ತುತ್ತಿರಲಿಲ್ಲ. ಹೀಗಾಗಿ ಬಸ್‍ಗಳು ತುಕ್ಕು ಹಿಡಿಯುವುದು ಬೇಡ ಎಂಬ ಉದ್ದೇಶದಿಂದ ಅದೇ ಬಸ್‍ಗಳನ್ನು ಚಿಕ್ಕಬಳ್ಳಾಪುರ ಕಡೆ ಸಂಚಾರ ಆರಂಭಿಸಲಾಗಿತ್ತು. ಕೆಎಸ್‍ಆರ್‍ಟಿಸಿ ವಿರೋಧದ ನಡುವೆಯೂ ಚಿಕ್ಕಬಳ್ಳಾಪುರಕ್ಕೆ ಆರಂಭವಾದ ಬಿಎಂಟಿಸಿ ಸೇವೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿರುವ ಹಿನ್ನಲೆಯಲ್ಲಿ ಬಿಎಂಟಿಸಿ ಬಸ್ ಸೇವೆಯನ್ನು ಕೋಲಾರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ. […]
ಮಾಜಿ ಶಾಸಕ ಸುರೇಶ್‍ಗೌಡ ಅವರ ಧಮಕಿ ವಿಡಿಯೋ ವೈರಲ್

ತುಮಕೂರು,ಡಿ.31- ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತ್ತೆ ಜಿದ್ದಾಜಿದ್ದಿನ ರಾಜಕಾರಣ ಬೆಳಕಿಗೆ ಬಂದಿದೆ. ಮಾಜಿ ಶಾಸಕ ಸುರೇಶ್ ಗೌಡ ಪೊಲೀಸ್ ಇನ್ಸ್‍ಪೆಕ್ಟರ್ ಒಬ್ಬರಿಗೆ ಕರೆ ಮಾಡಿ, ಹಾಲಿ ಶಾಸಕರ ಆಪ್ತ ಸಹಾಯಕನನ್ನು ಬಂಧಿಸಿ, ಕಾಲಿಗೆ ಗುಂಡು ಹೊಡೆಯಬೇಕು ಎಂದು ಧಮಕಿ ಹಾಕಿರುವ ವಿಡಿಯೋ ವೈರಲ್ ಆಗಿದೆ. ಈ ಮೊದಲು ಸುರೇಶ್ ಗೌಡ ಅವರ ಹಲವು ವಿಡಿಯೋಗಳು, ಸಂಭಾಷಣೆಗಳು ವೈರಲ್ ಆಗಿ, ವಿವಾದ ಸೃಷ್ಟಿಸಿದ್ದವು. ಈಗ ಅದೇ ರೀತಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸ್ ಅಧಿಕಾರಿಗೆ ದೂರವಾಣಿ […]
ತುಮಕೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ

ಬೆಂಗಳೂರು,ಡಿ.28- ಬಿಜೆಪಿಯ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ತುಮಕೂರಿನಲ್ಲಿ ಜನವರಿ 20 ಮತ್ತು 21ರಂದು ನಡೆಯಲಿದೆ. ಸಭೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭೆ ಚುನಾವಣೆ ಕುರಿತು ಚರ್ಚೆಗಳು ನಡೆಯಲಿದೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಮಾತನಾಡಲಿದ್ದಾರೆ. ಮಹಿಳಾ ಮೋರ್ಚಾದ ಅಧ್ಯಕ್ಷೆ ವನಾರ್ಥಿ ಶ್ರೀ ನಿವಾಸನ್ ಸೇರಿದಂತೆ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಹಿಳಾ […]