ತುಮಕೂರು ರಸ್ತೆ ಮೇಲ್ಸೇತುವೆ ಕಾಮಗಾರಿ ಮುಗಿಯೋದು ಯಾವಾಗ..?

ಬೆಂಗಳೂರು,ಫೆ.4- ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ರಸ್ತೆಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ದುರಸ್ತಿ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂಬುದು ಯಕ್ಷಪಶ್ನೆಯಾಗಿ ಉಳಿದಿದೆ. ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಳೆದ ಡಿ.25ರಂದು ಏಕಾಏಕಿ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಜ.14ರೊಳಗೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಆದರೆ ಅದು ಇನ್ನು ಮುಗಿಯುವುದು ಯಾವಾಗ ಎಂಬುದನ್ನು ತಿಳಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಪಿಲ್ಲರ್ ಸಂಖ್ಯೆ 102, 103 ಸೇರಿದಂತೆ ವಿವಿಧ ಪಿಲ್ಲರ್ಗಳ ಗುಣಮಟ್ಟದ ಬಗ್ಗೆ ಈಗಾಗಲೇ […]

ದುರಸ್ತಿಯಾಗದ ಮೇಲ್ಸೇತುವೆ, ಕನಿಷ್ಠ ಪ್ರಜ್ಞೆ ಮರೆತ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು

ಬೆಂಗಳೂರು, ಜ.29- ಸರ್ಕಾರಿ ವ್ಯವಸ್ಥೆ ಎಂಬುದು ಜನ ಹಿತ ಮರೆತು ಕಾಪೆರ್ರೇಟ್ ವಲಯದ ಬೆನ್ನೆಲುಬಾಗಿ ನಿಂತರೆ ಅದರ ಪರಿಣಾಮ ಏನಾಗಬಹುದು ಎಂಬುದಕ್ಕೆ ತಾಜಾ ಉದಾಹರಣೆ ತುಮಕೂರು ರಸ್ತೆಯ ಮೇಲುಸೇತುವೆ ದುರಸ್ಥಿ ಕಾಮಗಾರಿ. ಒಂದು ತಿಂಗಳಿಗೂ ಹಿಂದೆ ತುಮಕೂರು ರಸ್ತೆಯಲ್ಲಿರುವ ಮೇಲುಸೇತುವೆ ಪಿಲ್ಲರ್ ಸಂಖ್ಯೆ 102, 103ರ ಎಂಟನೆ ಮೈಲಿ ಬಳಿ ತೊಂದರೆ ಕಾಣಿಸಿಕೊಂಡಿದೆ. ಅದನ್ನು ಅಧಿಕಾರಿಗಳು ಮತ್ತು ತಜ್ಞರು ಸೂಕ್ತ ಸಮಯದಲ್ಲಿ ಗುರುತಿಸಿ ಹತ್ತಾರು ಪ್ರಾಣಗಳನ್ನು ಕಾಪಾಡಿದ್ದಾರೆ. ಮೇಲು ಸೇತುವೆ ಜೋಡಣೆಯ ಕೇಬಲ್ ಟೈಟನಿಂಗ್ ಕಾಮಗಾರಿಗಾಗಿ ಡಿಸೆಂಬರ್ […]