ಬುಧವಾರ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ ಗೊರಗುಂಟೆಪಾಳ್ಯ ಮೇಲ್ಸೇತುವೆ..!

ಬೆಂಗಳೂರು,ಜ.7-ಅಂತೂ ಇಂತೂ ತುಮಕೂರು ರಸ್ತೆ ಸಂಚಾರದ ಅವ್ಯವಸ್ಥೆಗೆ ಮುಕ್ತಿ ದೊರಕುವ ಲಕ್ಷಣಗಳು ಗೋಚರಿಸುತ್ತಿದೆ. ಗೊರಗುಂಟೆಪಾಳ್ಯ ಸಮೀಪದ ಮೇಲ್ಸೇತುವೆಯ ಎರಡು ಪಿಲ್ಲರ್‍ಗಳಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷದಿಂದ ಕಳೆದ ಡಿಸೆಂಬರ್ 25 ರಿಂದ ಮುಚ್ಚಲಾಗಿದ್ದ ಮೇಲ್ಸೇತುವೆ ಬುಧವಾರದಿಂದ ವಾಹನ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆಗಳಿವೆ. ದುರಸ್ತಿಪಡಿಸಲಾಗಿರುವ ಮೇಲ್ಸೇತುವೆಯ ಮೇಲೆ ಲೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಟೆಸ್ಟ್‍ನಲ್ಲಿ ತಜ್ಞರು ರಸ್ತೆ ಸಂಚಾರಕ್ಕೆ ಅನುಮತಿ ನೀಡಿದರೆ ಬುಧವಾರದಿಂದ ವಾಹನ ಸಂಚಾರ ಆರಂಭಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಮೇಲ್ಸೇತುವೆ ಮೇಲೆ ಲೋಡ್ ಟೆಸ್ಟಿಂಗ್ […]