ತುಂಗಭದ್ರಾ ಕಾಲುವೆಗೆ ಆಟೋ ಬಿದ್ದು ಇಬ್ಬರು ಕಾರ್ಮಿಕರ ಸಾವು

ಬಳ್ಳಾರಿ, ಸೆ.14- ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಆಟೋ ಕಾಲುವೆಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ ನಾಲ್ವರು ನಾಪತ್ತೆಯಾಗಿರುವ ಘಟನೆ ತಾಲ್ಲೂಕಿನ ಕೊಳಗಲ್ ಗ್ರಾಮದ ಬಳಿಯ ತುಂಗ ಭದ್ರಾ ಕಾಲುವೆ ಬಳಿ ಸಂಭವಿಸಿದೆ.ದುರ್ಗವ್ವ (40), ನಿಂಗಮ್ಮ (38) ಮೃತ ದುರ್ದೈವಿಗಳು. ಆಟೋ ಚಾಲಕ ಭೀಮ ಸೇರಿದಂತೆ 8 ಜನ ಕೂಲಿ ಕಾರ್ಮಿಕರು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಘಟನೆಯಲ್ಲಿ ಯರ್ರಮ್ಮ ಹಾಗೂ ಹೇಮಾವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರೆದಿದೆ. ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಗಂಡು […]