ರಸ್ತೆ ಗುಂಡಿ ಮುಚ್ಚಲು ವಿಫಲರಾಗುವ ಎಂಜಿನಿಯರ್‌ಗಳ ಅಮಾನತು ; ಆಯುಕ್ತರ ಎಚ್ಚರಿಕೆ

ಬೆಂಗಳೂರು,ನ.1- ನಿಗತ ಗಡುವಿನೊಳಗೆ ರಸ್ತೆ ಗುಂಡಿ ಮುಚ್ಚಲು ವಿಫಲರಾಗುವ ಎಂಜಿನಿಯರ್‍ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ಎಚ್ಚರಿಸಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.10ರೊಳಗೆ ರಸ್ತೆ ಗುಂಡಿ ಮುಚ್ಚುವಂತೆ ಎಂಜಿನಿಯರ್‍ಗಳಿಗೆ ಗಡುವು ನೀಡಲಾಗಿದೆ ಎಂದರು. ನಗರದಲ್ಲಿ ಸಧ್ಯಕ್ಕೆ ಮಳೆ ನಿಂತಿರುವುದರಿಂದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ. ಪ್ರತಿನಿತ್ಯ ಒಂದು ಸಾವಿರದಿಂದ ಒಂದೂವರೆ ಸಾವಿರ ಗುಂಡಿ ಮುಚ್ಚುವ ಕಾಮಗಾರಿಯನ್ನು ನಿರಂತರವಾಗಿ […]