15 ಸೆಕೆಂಡ್‍ಗಳಲ್ಲಿ ನೆಲಸಮವಾದ ಅವಳಿ ಗೋಪುರಗಳು

ನವದೆಹಲಿ, ಆ.28 (ಪಿಟಿಐ)- ಭಾರಿ ಮುನ್ನೆಚ್ಚರಿಕೆಯ ನಂತರ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಕುತುಬ್‍ಮೀನಾರ್‍ಗಿಂತ ಎತ್ತರದ ಅವಳಿ ಗೋಪುರಗಳನ್ನು 3700 ಕೆ.ಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸಿ ಜಲಪಾತದ ಸ್ಫೋಟ ತಂತ್ರದಿಂದ 15 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಇಂದು ಯಶಸ್ವಿಯಾಗಿ ನೆಲಸಮಗೊಳಿಸಲಾಯಿತು. ಅವಳಿ ಗೋಪುರಗಳ ಬಳಿಯಿರುವ ಎಮರಾಲ್ಡ ಕೋರ್ಟ್ ಮತ್ತು ಎಟಿಎಸ್ ವಿಲೇಜ್ ಸೊಸೈಟಿಗಳ 5,000 ನಿವಾಸಿಗಳನ್ನು ಇಂದು ಮುಂಜಾನೆಯಿಂದಲೇ ಬೇರೆಡೆಗೆ ಸ್ಥಳಾಂತರಿ ಸಲಾಗಿತ್ತು. ಎರಡು ಸೊಸೈಟಿಗಳಲ್ಲಿದ್ದ ಎಲ್ಲರ ಮನೆಗಳ ಅಡುಗೆ ಅನಿಲ ಮತ್ತು ವಿದ್ಯುತ್ ಸರಬರಾಜು ಮಾರ್ಗಗಳನ್ನು ಸಹ […]