ರೈಸ್ ಪುಲ್ಲಿಂಗ್ : ವಂಚಕರ ಬಂಧನ, 15 ಲಕ್ಷ ರೂ. ವಶ

ಬೆಂಗಳೂರು,ಫೆ.5- ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಹಣ ಪಡೆದು ಮೋಸ ಮಾಡಿದ್ದ ಇಬ್ಬರು ವಂಚಕರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ. ನಾಗರಬಾವಿಯ ವಿಘ್ನೇಶ್ (37) ಮತ್ತು ಕೊಲಾರ ಜಿಲ್ಲೆಯ ಮುಳಬಾಗಿಲಿನ ನಾಗರಾಜು (45) ಬಂಧಿತರು. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನೀತನ್‍ರಾಜ್ ಮತ್ತು ಅವರ ಸ್ನೇಹಿತ ಗೋಪಿ ಕಾರ್ತಿಕ್ ನಿಂತಿದ್ದಾಗ ಸುರೇಶ್ ಎಂಬುವರು ಇವರ ಬಳಿ ಬಂದು ರೈಸ್‍ಪುಲ್ಲಿಂಗ್ ಹೆಸರಿನಲ್ಲಿ ಗಮನ ಸೆಳೆದಿದ್ದಾರೆ. ಸಿಡಿಲು ಬಡಿದ ಅದೃಷ್ಟದ ಒಂದು ಚೆಂಬು ತೋರಿಸಿ […]