ಸೇನಾ ಶಿಬಿರದ ಮೇಲೆ ಉಗ್ರರ ದಾಳಿ, ಮೂವರು ಯೋಧರು ಹುತಾತ್ಮ
ಜಮ್ಮು, ಆ.11-ಕಾಶ್ಮೀರದ ರಜೌರಿ ಜಿಲ್ಲೆಯ ಪರ್ಗಲ್ ಸೇನಾ ಶಿಬಿರದ ಮೇಲೆ ಇಂದು ಮುಂಜಾನೆ ಆತ್ಮಾಹುತಿ ಭಯೋತ್ಪಾದಕರ ಗುಂಪು ದಾಳಿ ನಡೆಸಿ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.ಕ್ಷಿಪ್ರ ಕಾರ್ಯಾಚರನೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಶಸ್ತ್ರ ಸಜ್ಜಿತ ಭಯೋತ್ಪಾದಕರು ಮೂದಲು ಸೇನಾ ಶಿಬಿರದ ಬೇಲಿಯನ್ನು ದಾಟಲು ಪ್ರಯತ್ನಿಸಿದಾಗ ಎಚ್ಚೆತ ಕಾವಲುಗಾರ ಯೋಧ ಎಚ್ಚರಿಸಿ ಪ್ರತಿರೋಧಿಸಿದ್ದಾನೆ. ಈ ನಡುವೆ ಭಯೋತ್ಪಾದಕರ ಗುಂಡು ಹಾರಿಸಿದ್ದಾರೆ ನಂತರ ಗುಂಡಿನ ಚಕಮಕಿ ನಡೆಯಿತು ಎಂದು ಹೆಚ್ಚುವರಿ […]