ಸೇಫ್ಟಿಪಿನ್ ಬಳಸಿ ದ್ವಿಚಕ್ರ ವಾಹನಗಳ ಕಳ್ಳತನ: ಇಬ್ಬರ ಬಂಧನ

ಬೆಂಗಳೂರು : ಸೇಫ್ಟಿ ಪಿನ್ ಬಳಸಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬೊಮ್ಮನಹಳ್ಳಿಯ ರೂಪೇನ ಅಗ್ರಹಾರದ ಎನ್‍ಜಿಆರ್ ಲೇಔಟ್ ನಿವಾಸಿಗಳಾದ ಕಿಶೋರ್ ಅಲಿಯಾಸ್ ಮ್ಯಾನ್(23) ಮತ್ತು ಪ್ರವೀಣ್(22) ಬಂಧಿತ ಆರೋಪಿಗಳು. ಆರೋಪಿಗಳ ಪೈಕಿ ಕಿಶೋರ್ ಈ ಹಿಂದೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಬಂಧಿತನಾಗಿ ಜೈಲಿಗೆ ಹೋಗಿದ್ದಾಗ ಅಲ್ಲಿದ್ದ ಆರೋಪಿಯೊಬ್ಬ ದ್ವಿಚಕ್ರ […]