ಶಾಲಾ ಮೈದಾನದಲ್ಲೇ ಇಬ್ಬರು ಯುವಕರ ಭೀಕರ ಕೊಲೆ..

ಬೆಳಗಾವಿ, ಡಿ.26- ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಶಾಲಾ ಮೈದಾನಕ್ಕೆ ವಾಹನವೊಂದು ನುಗ್ಗಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಲಕ ಏಕಾಏಕಿ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಇಂದು ಮುಂಜಾನೆ ನಡೆದಿದೆ. ಶಿಂದೊಳ್ಳಿ ಗ್ರಾಮದ ಬಸವರಾಜ್ ಬೆಳಗಾಂವ್ಕರ್(22) ಮತ್ತು ಗಿರೀಶ್ ಗಣ್ಣವರ (22) ಕೊಲೆಯಾದ ದುರ್ದೈವಿಗಳು.ಇಲ್ಲಿನ ಹೊರವಲಯದ ಶಿಂದೊಳ್ಳಿ ಗ್ರಾಮದ ಸರ್ಕಾರಿ ಶಾಲೆ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ರಾತ್ರಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಮೈದಾನಕ್ಕೆ ಏಕಾಏಕಿ ವಾಹನವೊಂದು ನುಗ್ಗಿದೆ. ಮೈದಾನದಲ್ಲಿ […]