ಅಮೆರಿಕಾದಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಇಬ್ಬರ ಸಾವು

ವಾಷಿಂಗ್ಟನ್,ಫೆ.16- ಅಮೆರಿಕಾದಲ್ಲಿ ಸೇನಾ ಹೆಲಿಕಾಫ್ಟರ್ ಪತನಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ.ಅಮೆರಿಕದ ದಕ್ಷಿಣ ರಾಜ್ಯ ಅಲಬಾಮಾದ ಹೆದ್ದಾರಿಯೊಂದರ ಬಳಿ ಮಿಲಿಟರಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ. ಹೆಲಿಕಾಪ್ಟರ್ ಟೆನ್ನೆಸ್ಸೀ ನ್ಯಾಷನಲ್ ಗಾರ್ಡ್‍ಗೆ ಸೇರಿದ್ದು, ತರಬೇತಿ ಹಾರಾಟದಲ್ಲಿದ್ದಾಗ ಹಂಟ್ಸ್‍ವಿಲ್ಲ್ ನಗರದ ಬಳಿ ಮಧ್ಯಾಹ್ನದ ವೇಳೆ ಪತನಗೊಂಡಿದೆ ಎಂದು ತಿಳಿದುಬಂದಿದೆ. ನ್ಯಾಷನಲ್ ಗಾರ್ಡ್ ಒಂದು ರಾಜ್ಯ ಆಧಾರಿತ ಮಿಲಿಟರಿ ಪಡೆಯಾಗಿದ್ದು, ಫೆಡರಲ್ ಕಾರ್ಯಾಚರಣೆಗಳಿಗಾಗಿ ಸಕ್ರಿಯಗೊಳಿಸಲಾಗಿದ್ದು, ಇದು ಅಮೆರಿಕ ಮಿಲಿಟರಿ ಪಡೆಯ ಮೀಸಲು ಭಾಗವಾಗಿದೆ. ಇಬ್ಬರು ಟೆನ್ನೆಸ್ಸೀ […]
12 ಗಂಟೆಯೊಳಗೆ ಹುಲಿ ಬಾಯಿಗೆ ಆಹಾರವಾದ ಇಬ್ಬರು

ಕೊಡಗು, ಫೆ.13- ಕಳೆದ 12 ಗಂಟೆಯೊಳಗೆ ಜಿಲ್ಲೆಯಲ್ಲಿ ಇಬ್ಬರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಜಿಲ್ಲೆಯ ಪೊನ್ನಂ ಪೇಟೆಯ ಕುಟ್ಟಾ ಸಮೀಪ ರಾಜು(60) ಎಂಬುವರು ಹುಲಿ ದಾಳಿಗೆ ಜೀವ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿ ನಿವಾಸಿ ರಾಜು ಅವರು ನಾಲ್ಕೇರಿ ಗ್ರಾಮದ ಪೂಣಚ್ಚ ಎಂಬುವರ ಕಾಫಿ ತೋಟದಲ್ಲಿ ಇಂದು ಬೆಳಗ್ಗೆ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಹುಲಿಯೊಂದು ಇವರ ಮೇಲೆ ದಾಳಿ ಮಾಡಿ ಕಚ್ಚಿ ಸಾಯಿಸಿದೆ. ನಿನ್ನೆ ಸಂಜೆ ಕುಟ್ಟಾ ಗ್ರಾಮದ ಪಾಲೇರಿ ಎಂಬಲ್ಲಿ ಆಟವಾಡುತ್ತಿದ್ದ ಚೇತನ್(12) ಎಂಬಾತನ […]