ರಾಹುಲ್ ಪಾಕ್-ಚೀನಾ ಟೀಕೆಗೆ ಸಹಮತ ಇಲ್ಲ : ಅಮೆರಿಕ ಸ್ಪಷ್ಟನೆ

ನವದೆಹಲಿ, ಫೆ.3- ಕಾಂಗ್ರೆಸ್ ಧುರೀಣ ರಾಹುಲ್‍ಗಾಂದಿ ಅವರು ಸಂಸತ್ತಿನಲ್ಲಿ ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾಡಿರುವ ಟೀಕೆಗೆ ಅಮೆರಿಕದ ಸಹಮತ ಇಲ್ಲ ಎಂದು ಅಮೆರಿಕ ರಾಷ್ಟ್ರದ ವಿದೇಶಾಂಗ ಇಲಾಖೆ ವಕ್ತಾರ ತಿಳಿಸಿದ್ದಾರೆ. ನಿನ್ನೆ ಸಂಸತ್ತಿನಲ್ಲಿ ಅನೇಕ ವಿಷಯಗಳ ಬಗ್ಗೆ ಸರ್ಕಾರವನ್ನು ಟೀಕಿಸಿದ ರಾಹುಲ್ ನ್ಯೂನ ವಿದೇಶಾಂಗ ನೀತಿ ಅನುಸರಿಸುತ್ತಿರುವ ಮೋದಿ ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಎರಡು ಭಾರತಗಳ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ಹರಿಹಾಯ್ದಿದ್ದರು. ನೀವು ಗಣರಾಜ್ಯೋತ್ಸವಕ್ಕೆ ಓರ್ವ ಅತಿಥಿಯನ್ನು ಹೊಂದಲು ಏಕೆ ಸಾಧ್ಯವಾಗಲಿಲ್ಲ ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ. […]