ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್ ಲಲಿತ್..?

ನವದೆಹಲಿ. ಆ.4 – ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸ್ಥಾನವನ್ನು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿ ಉದಯ್ ಲಲಿತ್ ಅವರು ಅಲಂಕರಿಸುವ ಸಾಧ್ಯತೆ ಇದೆ. ತ್ರಿವಳಿ ತಲಾಖ್ ಸೇರಿದಂತೆ ಹಲವು ಮಹತ್ವದ ತೀರ್ಪುಗಳನ್ನು ನೀಡಿ ದೇಶದ ಗಮನ ಸೆಳೆದಿದ್ದ ಅವರು ಆಗಸ್ಟ್ 27 ರಂದು ಭಾರತದ 49 ನೇ ಸಿಜೆಐ ಆಗಲಿದ್ದಾರೆ. ನ್ಯಾಯಮೂರ್ತಿ ಲಲಿತ್ ಅವರು ಆ ಸ್ಥಾನಕ್ಕೆ ಏರಿದರೆ ವಕೀಲರ ಪರಿಷತ್(ಬಾರ್ )ನಿಂದ ನೇರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೆ ಏರಿದ ಎರಡನೇ ಸಿಜೆಐ ಆಗುತ್ತಾರೆ. […]