ರಾಜ್ಯಪಾಲರ ನಿರ್ಗಮನವನ್ನು ಸ್ವಾಗತಿಸಿ ಮಹಾರಾಷ್ಟ್ರ ನಾಯಕರು

ಮುಂಬೈ,ಫೆ.12- ರಾಜ್ಯಪಾಲರ ಸ್ಥಾನಕ್ಕೆ ಭಗತ್ ಸಿಂಗ್ ಕೊಶ್ಯಾರಿ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಮುಖ್ಯಸ್ಥ ಜಯಂತ್ ಪಾಟೀಲ್, ಹೊಸ ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಮೊದಲಿನ ರಾಜ್ಯಪಾಲ ಕೊಶ್ಯಾರಿ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೊಸ ರಾಜ್ಯಪಾಲರನ್ನಾಗಿ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್‍ರನ್ನು ನೇಮಕ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಯಂತ್ ಪಾಟೀಲ್, ಹೊಸ ರಾಜ್ಯಪಾಲರು ಹಿಂದಿನವರಂತೆ ಬಿಜೆಪಿಯ ಕೈಗೊಂಬೆಯಾಗುವುದಿಲ್ಲ ಎಂದು ಭಾವಿಸುತ್ತೇನೆ. ಮಹಾ ವಿಕಾಸ್ ಅಘಾಡಿಯ […]