ಮೈಸೂರು ಉದ್ಯಾನ ಕಲಾಸಂಘ, ನರ್ಸರಿಮೆನ್ ಸೊಸೈಟಿಗೆ ಅನುಮತಿ ನೀಡಿ

ಬೆಂಗಳೂರು,ಅ.24- ಲಾಲ್‍ಬಾಗ್ ಉದ್ಯಾನವನದಲ್ಲಿರುವ ದಿ ನರ್ಸರಿಮೆನ್ ಕೋ ಅಪರೇಟಿವ್ ಸೊಸೈಟಿಯ ಕಾರ್ಯ ಚಟುವಟಿಕೆಗಳನ್ನು ಯಾವುದೆ ಕಾರಣಕ್ಕೂ ಸ್ಥಗಿತಗೊಳಿಸಬಾರದು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಲಾಲ್ ಬಾಗ್ ಉದ್ಯಾನವನದಲ್ಲಿರುವ ದಿ ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿಯು ಕಳೆದ ಆರವತ್ತೈದು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸದರಿ ಸಂಸ್ಥೆಗೆ 1963 ರಲ್ಲಿ ಕೇವಲ 1.5 ಎಕರೆಗಳಷ್ಟು ಜಾಗವನ್ನು ಮಾತ್ರ ಸರ್ಕಾರದಿಂದ ಗುತ್ತಿಗೆಗೆ […]