497 ನಗರಗಳಲ್ಲಿ ನಾಳೆ ನೀಟ್ ಪರೀಕ್ಷೆ

ಬೆಂಗಳೂರು, ಜು.16- ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್) ಪರೀಕ್ಷೆ 2022 ನಾಳೆ ದೇಶಾದ್ಯಂತ 497 ನಗರಗಳಲ್ಲಿ ನಡೆಯಲಿದೆ. ದೇಶಾದ್ಯಂತ ಸುಮಾರು 18.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಅವರಲ್ಲಿ 10 ಲಕ್ಷ ಅಭ್ಯರ್ಥಿಗಳು ಮಹಿಳೆಯರಿದ್ದಾರೆ. ಮೊಟ್ಟ ಮೊದಲ ಬಾರಿಗೆ ಅಬ್ರಾಡ್‍ನಲ್ಲಿಯೂ ಸಹ ಪರೀಕ್ಷೆ ನಡೆಸಲಿದ್ದು, ಪರೀಕ್ಷೆಯ ಸಮಯದಲ್ಲಿ, ಅಭ್ಯರ್ಥಿಗಳು ಯಾವುದೇ ಲೋಹದ ಆಭರಣಗಳನ್ನು ಧರಿಸಲು ಅನುಮತಿಸಲಾಗುವುದಿಲ್ಲ. ಪರೀಕ್ಷಾ ಕೊಠಡಿಯೊಳಗೆ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಕೊಂಡೊಯ್ಯಲು ಸಹ ನಿರ್ಬಂಧಗಳಿವೆ. ಸುಗಮವಾಗಿ ಪರೀಕ್ಷೆಗಳು […]