ಉಕ್ರೇನ್‍ನಿಂದ ಇಂದು 65 ವಿದ್ಯಾರ್ಥಿಗಳು ರಾಜ್ಯಕ್ಕೆ ವಾಪಸ್

ಬೆಂಗಳೂರು,ಮಾ.7- ಉಕ್ರೇನ್‍ನಿಂದ ಇಂದು ಬೆಳಗ್ಗೆ 65 ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದು, ರಾಜ್ಯಕ್ಕೆ ಮರಳಿದವರ ಸಂಖ್ಯೆ 476ಕ್ಕೆ ಏರಿಕೆಯಾಗಿದೆ. ಯುದ್ಧಪೀಡಿತ ಉಕ್ರೇನ್‍ನಿಂದ ಇಂದು 6 ವಿಮಾನಗಳು ಮುಂಬೈ ಮತ್ತು ದೆಹಲಿಗೆ ಬರುತ್ತಿದ್ದು, ಅದರಲ್ಲಿ ಬಹಳಷ್ಟು ಕನ್ನಡಿಗರು ಬರುವ ಸಾಧ್ಯತೆಗಳಿವೆ ಎಂದು ಕರ್ನಾಟಕ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮತ್ತು ನೋಡೆಲ್ ಅಧಿಕಾರಿ ಡಾ.ಮನೋಜ್‍ರಾಜನ್ ತಿಳಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಆಗಮಿಸಿದ 65 ವಿದ್ಯಾರ್ಥಿಗಳನ್ನು ಸ್ವಾಗತಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇನ್ನು 163 ವಿದ್ಯಾರ್ಥಿಗಳು […]