2ನೇ ದಿನವೂ ಉಕ್ರೇನ್ ಮೇಲೆ ರಷ್ಯಾ ದಾಳಿ, 137ಕ್ಕೂ ಹೆಚ್ಚು ಮಂದಿ ಬಲಿ..!

ಕೀವ್, ಫೆ.25- ರಷ್ಯಾ ಆಕ್ರಮಣದಿಂದ ಉಕ್ರೇನ್ ಜರ್ಝರಿತವಾಗಿದ್ದು, ಎರಡನೆ ದಿನವೂ ದಾಳಿ, ಪ್ರತಿದಾಳಿ ಮುಂದುವರೆದಿವೆ. ಹೊಸದಾಗಿ ಜನವಸತಿ ಪ್ರದೇಶದ ಮೇಲೂ ಬಾಂಬ್ ದಾಳಿಯಾಗಿದೆ. ಜನ ಭಯಬೀತರಾಗಿ ಮೆಟ್ರೋ ನಿಲ್ದಾಣಗಳ ನೆಲ ಮಹಡಿಗಳಲ್ಲಿ ಅಡಗಿ ಕುಳಿತಿದ್ದಾರೆ. ಹಲವು ನಗರಗಳು ಹಾಗೂ ಮಿಲಿಟರಿ ನೆಲೆಗಳ ಮೇಲೆ ವಾಯುದಾಳಿ ಮುಂದುವರೆದಿದ್ದು, ಮೂರು ಕಡೆಯಿಂದ ರಷ್ಯಾ ಸೇನಾಪಡೆಗಳು ಮತ್ತು ಟ್ಯಾಂಕರ್‍ಗಳು ದಾಳಿ ನಡೆಸುತ್ತಿರುವುದರಿಂದ ಪುಟ್ಟ ದೇಶ ಉಕ್ರೇನ್ ನಲುಗಿ ಹೋಗಿದೆ. ಈ ವರೆಗೂ ಸೇನಾ ಸಿಬ್ಬಂದಿ ಮತ್ತು ನಾಗರಿಕರು ಸೇರಿ 137ಕ್ಕೂ ಹೆಚ್ಚು […]