ಉಕ್ರೇನ್‍ಗೆ IMFನಿಂದ 140 ಕೋಟಿ ಡಾಲರ್ ತುರ್ತು ನೆರವು

ವಾಷಿಂಗ್ಟನ್,ಮಾ.9-ರಷ್ಯಾ ಆಕ್ರಮಣದಿಂದ ತತ್ತರಿಸಿರುವ ಉಕ್ರೇನ್‍ಗೆ 140 ಕೋಟಿ ಡಾಲರ್ ತುರ್ತು ನೆರವು ನೀಡಲು ಐಎಂಎಫ್ ಮಂಡಳಿ ನಿರ್ಧರಿಸಿದೆ. ಉಕ್ರೇನ್‍ಗೆ 140 ಕೋಟಿ ಡಾಲರ್ ತುರ್ತು ನಿಯನ್ನು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿ(ಐಎಂಎಫ್) ಕಾರ್ಯ ನಿರ್ವಾಹಕ ಮಂಡಳಿ ಸಿದ್ದವಾಗಿದೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವ ಹೇಳಿದ್ದಾರೆ. ಕಳೆದ ಡಿಸೆಂಬರ್‍ನಲ್ಲಿ ಉಕ್ರೇನ್‍ಗೆ 70 ಕೋಟಿ ಡಾಲರ್‍ಗಿಂತಲೂ ಹೆಚ್ಚಿನ ಹಣವನ್ನು ಐಎಂಎಫ್ ನೀಡಿದೆ. ಆಗಸ್ಟ್‍ನಲ್ಲಿ ಐಎಂಎಫ್ ಹಂಚಿಕೆ ಭಾಗವಾಗಿ 270 ಕೋಟಿ ಡಾಲರ್ ತುರ್ತು ಮೀಸಲು ಹಣ ಪಡೆದಿದೆ […]