ಮಾತುಕತೆಗೆ ಬರುವಂತೆ ಪುಟಿನ್‍ಗೆ ಉಕ್ರೇನ್ ಅಧ್ಯಕ್ಷರ ಆಹ್ವಾನ

ಮಾಸ್ಕೋ,ಫೆ.20- ತನ್ನ ಭೂ ಪ್ರದೇಶದ ಒಳಗೆ ಮತ್ತು ಸುತ್ತಮುತ್ತ ರಷ್ಯಾ-ಬೆಂಬಲಿತ ಬಂಡುಕೋರರು ನಡೆಸುತ್ತಿರುವ ಹಿಂಸಾಚಾರ ಹೆಚ್ಚಾಗುತ್ತಿದ್ದು, ರಷ್ಯಾದಿಂದ ಆಕ್ರಮಣ ಭೀತಿ ಅಕವಾಗುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‍ಸ್ಕಿ ಅವರು ಮಾತುಕತೆಯ ಮೂಲಕ ಬಿಕ್ಕಟ್ಟು ಇತ್ಯರ್ಥಪಡಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮೊಂದಿಗೆ ಚರ್ಚೆ ನಡೆಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ನೀಡಿದ್ದಾರೆ. ರಷ್ಯಾ ಒಕ್ಕೂಟ ಏನು ಬಯಸುತ್ತದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಆದ್ದರಿಂದ ನಾನು ಮಾತುಕತೆ ನಡೆಸಬೇಕೆಂದು ಪ್ರಸ್ತಾಪಿಸುತ್ತಿದ್ದೇನೆ ಎಂದು ಝೆಲೆನ್‍ಸ್ಕಿ ಅವರು ಮ್ಯೂಸಿಚ್ ಭದ್ರತಾ ಸಮಾವೇಶದಲ್ಲಿ […]