ವೇಗದ ಬೌಲರ್ ಉಮೇಶ್ ಯಾದವ್‍ಗೆ ಸ್ನೇಹಿತನಿಂದಲೇ ವಂಚನೆ

ಮುಂಬೈ,ಜ.22- ಭಾರತ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಅವರು ನಾಗ್ಪುರದಲ್ಲಿ ಜಮೀನು ಖರೀದಿಸಲು ಹೋಗಿ ತನ್ನ ಸ್ನೇಹಿತನಿಂದಲೇ ವಂಚನೆಗೊಳಗಾಗಿದ್ದಾರೆ. ಈ ಸಂಬಂಧ ಶೈಲೇಸ್ ಠಾಕ್ರೆ ಎಂಬುವವರ ಮೇಲೆ ಉಮೇಶ್ ಯಾದವ್ ಪೊಲೀಸರಿಗೆ ದೂರು ನೀಡಿದ್ದಾರೆ.ಕಳೆದ 2014 ಜುಲೈ 15ರಂದು ಉಮೇಶ್ ಯಾದವ್ ಭಾರತ ತಂಡಕ್ಕೆ ಆಯ್ಕೆಯಾದ ನಂತರ ನಿರುದ್ಯೋಗಿಯಾಗಿದ್ದ ತನ್ನ ಸ್ನೇಹಿತ ಠಾಕ್ರೆಯನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಾಲಕ್ರಮೇಣ ಉಮೇಶ್ ಯಾದವ್ ಅವರ ವಿಶ್ವಾಸಗಳಿಸಿದ್ದು, ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನಿಭಾಯಿಸಲು ಪ್ರಾರಂಭಿಸಿದ್ದು, ಬ್ಯಾಂಕ್ […]