ಮಹಿಳೆಯರ ಅಸ್ಮಿತೆ ಅಳಿಸಿ ಹಾಕುವ ತಾಲಿಬಾನ್ ಪ್ರಯತ್ನಗಳಿಗೆ ತೀವ್ರ ವಿರೋಧ

ಜಿನೀವಾ, ಜ.18- ಯುದ್ಧ ಸಂತ್ರಸ್ಥವಾಗಿದ್ದ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮಹಿಳೆಯರು, ಬಾಲಕಿಯರ ಮುಖ್ಯವಾಹಿನಿ ಬದುಕನ್ನು ಸ್ಥಿರವಾಗಿ ಅಳಿಸಿ ಹಾಕುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ತಜ್ಞರು ಕಳವಳ ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಾದ ಹಜಾರಾ, ತಾಜಿಕ್, ಹಿಂದೂಗಳ ಮಹಿಳೆಯರ ಪರಿಸ್ಥಿತಿ ದೇಶದಲ್ಲಿ ಇನ್ನಷ್ಟು ದುರ್ಬಲವಾಗಿವೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ. ದೇಶದಾದ್ಯಂತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಿಂದ ಮಹಿಳೆಯರನ್ನು ಹೊರಗಿಡುವ ನಿರಂತರ ಮತ್ತು ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂದು 35 […]