ರೈಲು ನಿಲ್ದಾಣದಲ್ಲಿ 1.71 ಕೋಟಿ ನಗದು, ಚಿನ್ನದ ಬಿಸ್ಕತ್ತು ಪತ್ತೆ
ಥಾಣೆ, ಅ. 3 – ಮಹಾರಾಷ್ಟ್ರದ ಥಾಣೆ ಜಿಲ್ಲಾಯ ಟಿಟ್ವಾಲಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಮೂಟೆಯಲ್ಲಿ ಸಾಗಿಸುತ್ತಿದ್ದ 1.71 ಕೋಟಿ ರೂಪಾಯಿ ಮೌಲ್ಯದ ನಗದು ಹಾಗು ಎರಡು ಚಿನ್ನದ ಬಿಸ್ಕತ್ತುಗಳನ್ನು ಆರ್ಪಿಎಫ್ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ವ್ಯಕ್ತಿಯನ್ನು ಗಮನಿಸಿ ಆರ್ಪಿಎಫ್ ಸಿಬ್ಬಂದಿ ಆತನನ್ನು ವಿಚಾರಿಸಿದ್ದಾರೆ ಅದರೆ ಆತ ತಡಬಡಾಯಿಸಿದಾಗ ಬೆನ್ನ ಹಿಂದೆ ಹೊತ್ತಿಕೊಂಡಿದ್ದ ಮೂಟೆಯೊಂದಿಗೆ ಠಾಣೆಗೆ ಕರೆತಂದಿದ್ದಾರೆ. ನಂತರ ವಿಚಾರಣೆ ಬಳಿಕ ಆತ ನನ್ನ ಹೆಸರು ಗಣೇಶ್ ಮೊಂಡಲ್ ವ್ಯಾಪಾರಿ […]