ಪೂರ್ವಾಗ್ರಹ ಪೀಡಿತ ಪತ್ರಕರ್ತರ ಮಾನ್ಯತೆ ರದ್ದು ; ಕೇಂದ್ರ ಸರ್ಕಾರದಿಂದ ಹೊಸ ನಿಯಮಗಳು ಪ್ರಕಟ
ನವದೆಹಲಿ,ಫೆ.8- ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಅಥವಾ ನೈತಿಕತೆಗೆ ಹಾನಿಯುಂಟುಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ತಮ್ಮ ಸರ್ಕಾರಿ ಮಾನ್ಯತೆಯನ್ನು ಕಳೆದುಕೊಳ್ಳುತ್ತಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಹೊಸ ಮಾರ್ಗಸೂಚಿಗಳಲ್ಲಿ ತಿಳಿಸಿದೆ. ನಿನ್ನೆ ಪ್ರಕಟಿಸಲಾದ ಕೇಂದ್ರೀಯ ಮಾಧ್ಯಮ ಮಾನ್ಯತೆ ಮಾರ್ಗಸೂಚಿಗಳು-2022, ಆನ್‍ಲೈನ್ ಸುದ್ದಿ ವೇದಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೂ ಮಾನ್ಯತಾ ಪತ್ರಗಳನ್ನು ನೀಡುವ ಪ್ರಸ್ತಾವನೆ ಮಾಡಿದೆ. ಸುದ್ದಿ ಸಂಗ್ರಹಕರನ್ನು ಮಾನ್ಯತೆಗೆ ಪರಿಗಣಿಸುವಂತ್ತಿಲ್ಲ ಎಂದು ಸರ್ಕಾರ ಹೇಳಿದೆ. ಹೊಸ ನೀತಿಯ […]