ಪೀಣ್ಯ-ನಂದಿನಿ ಬಡಾವಣೆ ಸಂಪರ್ಕ ಕೆಳಸೇತುವೆಗೆ ಗ್ರಹಣ : ಬಿಡಿಎ ಮೊಂಡುತನಕ್ಕೆ ಜನ ಹೈರಾಣ

ನಿನ್ನೆ ಚಂದ್ರನಿಗೆ ಹಿಡಿದ ಗ್ರಹಣ ಬಿಟ್ಟಿದೆ. ಆದರೆ, ಹೊರ ವರ್ತುಲ ರಸ್ತೆಗೆ ಅಡ್ಡಲಾಗಿ ಕಂಠೀರವ ಸ್ಟುಡಿಯೋ ಬಳಿ ನಂದಿನಿ ಬಡಾವಣೆಯಿಂದ ಪೀಣ್ಯಗೆ ಸಂಪರ್ಕ ಕಲ್ಪಿಸುವ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಹಿಡಿದಿರುವ ಗ್ರಹಣ 10 ವರ್ಷವಾದರೂ ಬಿಟ್ಟಿಲ್ಲ. ಮುಂದೆ ಬಿಡುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಂಠೀರವ ಸ್ಟುಡಿಯೋ ಮುಂಭಾಗದ ಮೇಲ್ಸೇತುವೆ ಕೆಳಭಾಗದಿಂದ ನಂದಿನಿ ಬಡಾವಣೆಯಿಂದ ಪೀಣ್ಯ ಕಡೆ ಸಾಗುವ ವಾಹನಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಕಳೆದ 2012ರಲ್ಲಿ ಆರಂಭಿಸಿದ್ದ ಕಾಮಗಾರಿಗೆ ಇನ್ನು ಮುಕ್ತಿ ದೊರೆತಿಲ್ಲ. ಕಾಮಗಾರಿ ಸ್ಥಗಿತಕ್ಕೆ ಬಿಡಿಎ ಅಧಿಕಾರಿಗಳ […]