ಭಾರತದ 41 ಕೋಟಿ ಜನ ಬಡತನದಿಂದ ಮುಕ್ತ : ವಿಶ್ವಸಂಸ್ಥೆ

ವಿಶ್ವಸಂಸ್ಥೆ,ಅ.17- ಕಳೆದ 15 ವರ್ಷದಲ್ಲಿ ಭಾರತದ 41.5 ಕೋಟಿ ಜನ ಬಡತನದಿಂದ ಹೊರಬಂದಿದ್ದು, ಇದು ಐತಿಹಾಸಿಕ ಬದಲಾವಣೆ ಎಂದು ವಿಶ್ವಸಂಸ್ಥೆ ವಿಶ್ಲೇಷಿಸಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ(ಯುಎನ್‍ಡಿಪಿ), ಆಕ್ಸ್‍ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ(ಒಪಿಎಚ್‍ಐ) ಸಂಸ್ಥೆಗಳು ಆಕ್ಸ್‍ಫರ್ಡ್ ಯೂನಿವರ್ಸಿಟಿ ಸಂಯುಕ್ತಾಶ್ರಯದಲ್ಲಿ ಸಿದ್ದಗೊಳಿಸಿರುವ ಬಹು ಆಯಾಮ ಬಡತನ ಸೂಚ್ಯಂಕ(ಎಂಪಿಐ) ವರದಿಯನ್ನು ಇಂದು ಬಿಡುಗಡೆ ಮಾಡಿದೆ. ಇದರ ಪ್ರಕಾರ 2005-06 ಮತ್ತು 2019/21ರ ನಡುವೆ 415 ಮಿಲಿಯನ್(41.5 ಕೋಟಿ) ಜನ ಬಡತನದಿಂದ ಮುಕ್ತರಾಗಿದ್ದಾರೆ. ಈ ಪ್ರಾತ್ಯಕ್ಷಿಕೆ ಸುಸ್ಥಿರ ಅಭಿವೃದ್ಧಿಯ 1.2 […]