ಮತ್ತೊಂದು ಬಲೂನ್ ಹೊಡೆದುರುಳಿಸಿದ ಅಮೆರಿಕ

ವಾಷಿಂಗ್‍ಟನ್, ಫೆ.12- ಕೆನಡಾ ಮತ್ತು ಅಮೆರಿಕದ ಗಡಿ ವಾಯುಪ್ರದೇಶದ ಮೇಲೆ ಹಾರಾಡುತ್ತಿದ್ದ ವಸ್ತುವನ್ನು ಅಮೆರಿಕದ ಯುದ್ಧವಿಮಾನ ಹೊಡೆದುರುಳಿಸಿ ನಾಶಪಡಿಸಿದೆ. ಕೆನಡಾದ ಯುಕೋನ್ ಪ್ರಾಂತ್ಯದ ಆಗಸದ ಮೇಲೆ ಹಾರುತ್ತಿದ್ದ ವಸ್ತುವೊಂದನ್ನು ಗಮನಿಸಿ ನಿಖರವಾಗಿ ಕಾರ್ಯಾಚರಣೆ ನಡೆಸಿ ನಾಶಗೊಳಿಸಲಾಗಿದೆ. ಚೀನಾದ ಬಲೂನ್ ಸೇರಿ ಮೂರು ಆಕಾಶಕಾಯ ವಸ್ತುಗಳನ್ನು ಹೊಡೆದುರಳಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಯುಕೋನ್‍ನ ವಾಯುಪ್ರದೇಶದಲ್ಲಿ ಸುಮಾರು 40 ಸಾವಿರ ಅಡಿ ಎತ್ತರದಲ್ಲಿ ಈ ವಸ್ತು ಹಾರಾಡುತ್ತಿತ್ತು. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಇದನ್ನು ಹೊಡೆದುರುಳಿಸಲು ಆದೇಶ ನೀಡಿದ […]