ಧಾರವಾಡ ಕಸೂತಿ ಕಲೆಯ ಸೀರೆಯುಟ್ಟು ಬಜೆಟ್ ಮಂಡಿಸಿದ ನಿರ್ಮಲಾ

ಧಾರವಾಡ,ಫೆ.1-ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡನೆಗಾಗಿ ಇಂದು ಸಂಸತ್ತಿಗೆ ಆಗಮಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮೆರೂನ್ ಕಲರ್) ಬಣ್ಣದ ಸೀರೆಯುಟ್ಟು ಬಂದಿದ್ದು ವಿಶೇಷ. ಈ ಸೀರೆಗೆ ಕಸೂತಿ ಹಾಕಿ ವಿಶೇಷವಾಗಿ ರೂಪಿಸಿದ್ದು ನಮ್ಮ ಧಾರವಾಡ ನಗರದ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಫ್ಟ್‍ನ ಮಹಿಳಾಮಣಿಗಳು ಅನ್ನುವುದು ಇನ್ನೂ ವಿಶೇಷ.ಜಿಲ್ಲೆಯ ಸಂಸದರು, ಕೇಂದ್ರ ಸಚಿವರು ಆಗಿರುವ ಪ್ರಲ್ಹಾದ ಜೋಶಿ ಅವರು ನವಲಗುಂದ ಕಸೂತಿ […]

ಕೇಂದ್ರ ಬಜೆಟ್‍ನ ಕೆಲವು ಮುಖ್ಯ ಅಂಶಗಳು ಇಲ್ಲಿವೆ ನೋಡಿ

ನವದೆಹಲಿ,ಫೆ.1- ರಾಜ್ಯಗಳಿಗೆ ಮತ್ತೊಂದು ವರ್ಷಕ್ಕೆ ಬಡ್ಡಿ ರಹಿತ ಸಾಲ ಯೋಜನೆ ಮುಂದುವರಿಕೆ, ಆದಾಯ ತೆರಿಗೆ ಮಿತಿಯನ್ನು 5ರಿಂದ 7 ಲಕ್ಷಕ್ಕೆ ಏರಿಕೆ, ಉದ್ಯೋಗ ಕೌಶಲ್ಯ, ಯುವ ಮತ್ತು ಮಹಿಳಾ ಸಬಲೀಕರಣ, ಶಿಕ್ಷಣ, ರಕ್ಷಣೆಗೆ ಆದ್ಯತೆ ನೀಡುವ, ಮಧ್ಯಮ ವರ್ಗಕ್ಕೆ ಹೊರೆಯಾಗದ, ತೆರಿಗೆ ಭಾರವಿಲ್ಲದ, ಸಾದಾಸೀದ ಬಜೆಟ್‍ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಲೋಕಸಭೆಯಲ್ಲಿಂದು ಮಂಡಿಸಿದರು. ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಂ, ಸಿಗರೇಟ್, ತಂಬಾಕು ಉತ್ಪನ್ನ, ಆಮದು ಮಾಡಿಕೊಂಡ ರಬ್ಬರ್, ಬ್ರಾಂಡೆಡ್ ಬಟ್ಟೆಗಳು,ಹೆಡ್‍ ಫೋನ್‍ಗಳು ಮತ್ತು ಇಯರ್‍ಪೋನ್‍ಗಳು, […]