ತ್ರಿಬಲ್ ಐಟಿ (IIIT) ಅಷ್ಟೇ ಅಲ್ಲ, ಡಿಸೆಂಬರ್ ನಲ್ಲಿ ಐಐಟಿ (IIT) ಕ್ಯಾಂಪಸ್ ಕೂಡ ಉದ್ಘಾಟನೆಗೆ ಸಜ್ಜಾಗಿದೆ : ಜೋಶಿ
ಡಿಸೆಂಬರ್ ತಿಂಗಳ ಅಂತ್ಯದೊಳಗೆ ಧಾರವಾಡ ಐಐಟಿ (IIT) ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಅವರು, ಪ್ರತಿಷ್ಠಿತ ಧಾರವಾಡದ “ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT) ಉದ್ಘಾಟನಾ ಕಾರ್ಯಕ್ರಮದಲ್ಲಿಂದು ಪಾಲ್ಗೊಂಡು ಮಾತನಾಡುತ್ತಿದ್ದರು. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು ತ್ರಿಬಲ್ ಐಟಿ (IIIT) ಸಂಸ್ಥೆ ಕ್ಯಾಂಪಸ್ ಉದ್ಘಾಟಿಸಿದರು. ಧಾರವಾಡಕ್ಕೆ ತ್ರಿಬಲ್ ಐಟಿ ಸಂಸ್ಥೆ ತರುವಲ್ಲಿ ಶ್ರಮಿಸಿದ್ದ ಧಾರವಾಡ ಲೋಕಸಭಾ ಸಂಸದ ಹಾಗು ಕೇಂದ್ರ ಸಚಿವರಾಗಿರುವ ಪ್ರಲ್ಹಾದ್ […]